ಕಲಬುರಗಿ | ನಗರದ ಗ್ರಾಹಕರಿಗೆ ನೀರಿನ ಕರ ಪಾವತಿಸಲು ಸೂಚನೆ

Update: 2025-03-29 20:25 IST
ಕಲಬುರಗಿ | ನಗರದ ಗ್ರಾಹಕರಿಗೆ ನೀರಿನ ಕರ ಪಾವತಿಸಲು ಸೂಚನೆ

ಸಾಂದರ್ಭಿಕ ಚಿತ್ರ

  • whatsapp icon

ಕಲಬುರಗಿ : ಕಲಬುರಗಿ ನಗರದಲ್ಲಿ ಈಗಾಗಲೇ ಮೆಎಲ್ ಆಂಡ್ ಟಿ ಕಂಪನಿಯಿಂದ ಪ್ರಾಯೋಗಿಕವಾಗಿ ಕಲಬುರಗಿ ನಗರದ ಐವಾನ್‌ ಶಾಹಿ ಏರಿಯಾ ಹಾಗೂ ಓಜಾ ಲೇಔಟ್‍ಗಳಲ್ಲಿ 24x7 ನಿರಂತರ ನೀರು ಸರಬರಾಜು ಮಾಡಲಾಗುತ್ತಿದ್ದು, ಗ್ರಾಹಕರು ಬಾಕಿ ಉಳಿಸಿಕೊಂಡಿರುವ ನೀರಿನ ಕರವನ್ನು ಪಾವತಿಸಿ, ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಸಹಕರಿಸಬೇಕೆಂದು ಕಲಬುರಗಿ ಕೆಯುಡಬ್ಲ್ಯೂಎಸ್‍ಎಂಪಿ-ಕೆಯುಐಡಿಎಫ್‍ಸಿ ಯೋಜನಾ ಅನುಷ್ಠಾನ ಘಟಕದ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು ನಗರದ ಗ್ರಾಹಕರಲ್ಲಿ ಮನವಿ ಮಾಡಿದ್ದಾರೆ.

ಕಲಬುರಗಿ ನಗರದ ನೀರು ಸರಬರಾಜಿನ ಗ್ರಾಹಕರು ಸುಮಾರು 73 ಕೋಟಿ ರೂ.ಗಳ ನೀರಿನ ಕರ ಬಾಕಿ ಉಳಿಸಿಕೊಂಡಿದ್ದು, ನಿರಂತರ ನೀರು ಸರಬರಾಜು ಯೋಜನೆ ಯಶಸ್ವಿ ಅನುಷ್ಠಾನ ಮತ್ತು ನಿರ್ವಹಣೆಗಾಗಿ ನೀರಿನ ಕರ ಸಂಗ್ರಹಿಸುವುದು ಅತೀ ಅವಶ್ಯಕವಾಗಿದೆ. ಆದ್ದರಿಂದ ಸಾರ್ವಜನಿಕರು ನೀರಿನ ಕರವನ್ನು ಕರ್ನಾಟಕ ಒನ್, ಮಹಾನಗರ ಪಾಲಿಕೆಯ ಆನ್‍ಲೈನ್‍ನಲ್ಲಿ ನೀರಿನ ಬಿಲ್ ವಿತರಕರ ಹತ್ತಿರ ಇರುವ ಕ್ಯೂ ಆರ್ ಕೋಡ್, ಮೂಲಕ ಕಲಬುರಗಿಯಲ್ಲಿ ಇರುವ ಮೆಎಲ್ ಆಂಡ್ ಟಿ ಕಂಪನಿ ಸ್ಥಾಪಿಸಿರುವ ಕ್ಯಾಶ್‍ಕೌಂಟರ್ ಗಳಲ್ಲಿ ನೀರಿನ ಕರ ತುಂಬಿ ಮಹಾನಗರ ಪಾಲಿಕೆಗೆ ಸಹಕರಿಸಬೇಕು. ಸಾರ್ವಜನಿಕರ ಹಾಗೂ ಸರ್ಕಾರಿ ಉದ್ಯೋಗಿಗಳ ಅನುಕೂಲಕ್ಕಾಗಿ ರವಿವಾರ ಹಾಗೂ ಸರ್ಕಾರಿ ರಜಾ ದಿನಗಳಂದು ಈ ಮೇಲ್ಕಂಡ ಸ್ಥಳಗಳಲ್ಲಿ ನೀರಿನ ಕರದ ಬಿಲ್ಲಿನ ಮೊತ್ತವನ್ನು ಪಾವತಿಸಲು ಕ್ರಮ ಕೈಗೊಳ್ಳಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಕೇಂದ್ರೀಕೃತ ಗ್ರಾಹಕರ ಸೇವಾ ಕೇಂದ್ರವನ್ನು ಸುಪರ್ ಮಾರ್ಕೆಟ್‍ನಿಂದ ಮನೆ ಸಂಖ್ಯೆ 1024/4ಎ ಅತ್ತರ ಕಂಪೌಂಡ ಸಿದ್ದೇಶ್ವರ ನಗರ ಕಲಬುರಗಿ-585101 ಸ್ಥಳಾಂತರಸಿಲಾಗಿದೆ. ನೀರು ಸರಬರಾಜು ಸಹಾಯವಾಣಿ ಸಂಖ್ಯೆ +91 1800 425 8247 ಗೆ ಸಂಪರ್ಕಿಸಬೇಕೆಂದು ಕಲಬುರಗಿ ಯೋ.ಅ.ಘ.ಕುಸ್ಸೆಂಪ್-ಕೆಯುಐಡಿಎಫ್‍ಸಿ ಕಾರ್ಯಪಾಲಕ ಅಭಿಯಂತರರು ವಿನಂತಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News