ಕಲಬುರಗಿ | ಬಿಹಾರದ ಮಹಾಬೋಧಿ ಮಹಾವಿಹಾರದ ಆಡಳಿತವನ್ನು ಬೌದ್ಧರಿಗೆ ನೀಡಲು ಆಗ್ರಹಿಸಿ ಪ್ರತಿಭಟನೆ

ಕಲಬುರಗಿ : ಬಿಹಾರಾದ ಮಹಾಬೋಧಿ ಮಹಾವಿಹಾರದ ಆಡಳಿತ ಸಂಪೂರ್ಣ ಬೌದ್ಧರಿಗೆ ನೀಡಬೇಕು, ಬಿ.ಟಿ.ಆಕ್ಟ್ 1949 ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಬುದ್ದಗಯಾದಲ್ಲಿ ನಡೆದಿರುವ ಮಹಾಬೋಧಿ ಮಹಾವಿಹಾರ ಮುಕ್ತಿ ಆಂದೋಲನಕ್ಕೆ ಬೆಂಬಲಿಸಿ ಬೌದ್ಧ ಬಿಕ್ಕು ಉಪಾಸಕ ಮತ್ತು ಉಪಾಸಕಿಯರ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಗರದ ಜಗತ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಇಂದು ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಧಮ್ಮಾನಂದ ಭಂತೇಜಿ, ವರಜ್ಯೋತಿ ಭಂತೇಜಿ, ಧಮ್ಮಪಾಲ ಭಂತೇಜಿ, ಮುಖಂಡ ರಾದ ಡಾ.ವಿಠಲ್ ದೊಡ್ಡನಿ, ಮಲ್ಲಪ್ಪ ಹೊಸಮನಿ, ಸೂರ್ಯಕಾಂತ ನಿಂಬಾಳಕರ್, ಪ್ರಕಾಶ ಮೂಲಭಾರತಿ, ಲಕ್ಷ್ಮೀಕಾಂತ ಹುಬಳಿ, ವಾಸು ವಂಟಿ, ಹಣಮಂತ ಯಳಸಂಗಿ, ಅಂಬಾರಾಯ ಅಷ್ಟಗಿ, ಬಸವರಾಜ ಬೆಣ್ಣೂರ, ಹಣಮಂತ ಇಟಗಿ, ದೇವೆಂದ್ರ ಶೆಳ್ಳಗಿ, ಅರ್ಜುನ ಭದ್ರೆ, ಸುರೇಶ ಕಾನೇಕರ್, ಭೀಮರಾವ ತೇಗಲತಿಪ್ಪಿ, ಮರೆಪ್ಪ ಹಳ್ಳಿ, ಸುರೇಶ ಹಾದಿಮನಿ, ಸುರೇಶ ಮಂಗನ್, ಪವನಕುಮಾರ ವಳಕೇರಿ, ಯಶ್ವಂತ ಸಿಂಧೆ, ಪ್ರಕಾಶ ಔರಾದಕರ್, ರಮೇಶ ಚಿಮ್ಮಾ ಇದ್ದಾಯಿ, ಮಿಲಿಂದ ಸನಗುಂದಿ ಸೇರಿ ದಂತೆ ಬೌದ್ಧ ಭಿಕ್ಕುಗಳು, ಬೌದ್ಧ ಉಪಾಸಕ/ಉಪಾಸಕಿಯರು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮನವಿ ಪತ್ರ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿಯವರು ತುರ್ತಾಗಿ ರಾಷ್ಟ್ರಪತಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.