ಕಲಬುರಗಿ | ʼದೇಖೋ ಅಪ್ನಾ ದೇಶ್ ಫೋಟೋ ಕಾಂಟೆಸ್ಟ್-2025ʼ

Update: 2025-04-05 19:03 IST
ಕಲಬುರಗಿ | ʼದೇಖೋ ಅಪ್ನಾ ದೇಶ್ ಫೋಟೋ ಕಾಂಟೆಸ್ಟ್-2025ʼ
  • whatsapp icon

ಕಲಬುರಗಿ : ದೇಶದ ಪ್ರವಾಸೋದ್ಯಮವನ್ನು ಮತ್ತಷ್ಟು ಮೇಲ್ದರ್ಜೆಗೇರಿಸಲು ಮತ್ತು ಪ್ರವಾಸಿ ತಾಣಗಳ ಅಭಿವೃದ್ದಿಗೆ ಕೇಂದ್ರ ಪ್ರವಾಸೋದ್ಯಮ ಇಲಾಖೆಯು “Dekho apna Desh Photo Contest 2025" ಸ್ಪರ್ಧೆ ಆಯೋಜಿಸಿದ್ದು, ಕಲಬುರಗಿ ಜಿಲ್ಲೆಯ ಮೆಚ್ಚಿನ ಪ್ರವಾಸಿ ತಾಣಗಳ ಕುರಿತು ವಿವಿಧ ವಿಭಾಗದಲ್ಲಿ ಛಾಯಾಚಿತ್ರ ಸಲ್ಲಿಸಿ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ ಎಂದು ಕಲಬುರಗಿ ವಿಭಾಗದ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ಸ್ಪರ್ಧೆ ಕಳೆದ ಮಾ.7 ರಿಂದ‌ ಆರಂಭವಾಗಿದ್ದು, ಭಾಗವಹಿಸಲು ಎ.7 ಕೊನೆ ದಿನವಾಗಿದೆ. ಹೀಗಾಗಿ ಜಿಲ್ಲೆಯ ಸ್ಥಳೀಯ ಛಾಯಾಗ್ರಾಹಕರು, ಸಾರ್ವಜನಿಕರು, ಪ್ರವಾಸಿಗರು ವಿವಿಧ ವಿಭಾಗದಲ್ಲಿ ತಮ್ಮ ನೆಚ್ಚಿನ ಪ್ರವಾಸಿ ತಾಣದ ಆಕರ್ಷಕ ಛಾಯಾಚಿತ್ರಗಳನ್ನು ಸೆರೆಹಿಡಿದು dekhoapnadeshphotos@gmail.com ಇ-ಮೇಲ್ ವಿಳಾಸಕ್ಕೆ ನೇರವಾಗಿ 2025ರ ಎ.7 ರೊಳಗಾಗಿ ಸಲ್ಲಿಸಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ಸ್ಮಾರಕ (Monument), ವನ್ಯಜೀವಿ (Wildlife), ಜಿ.ಐ. ಟ್ಯಾಗ್ ಕರಕುಶಲ ವಸ್ತುಗಳು ಮತ್ತು ಕೈಮಗ್ಗಗಳು (GI tag handicraft & handlooms), ಲ್ಯಾಂಡ್‍ಸ್ಕೇಪ್ (Landscape) ಹಾಗೂ ಸಾಹಸ (Adventure) ವಿಭಾಗಗಳಲ್ಲಿ ಸ್ಪರ್ಧೆ ಆಯೋಜಿಸಲಾಗಿದೆ.

ಛಾಯಾಚಿತ್ರವನ್ನು ಕ್ಯಾಮರಾ ಅಥವಾ ಮೊಬೈಲ್ ಫೋನ್ ಮೂಲಕ ತೆಗೆಯಬಹುದು. ಛಾಯಾಗ್ರಾಹಕನು ತನ್ನ ಹೆಸರಿನಲ್ಲಿ ಸಲ್ಲಿಸಿದ ಛಾಯಾಚಿತ್ರಗಳ ಲೇಖಕನಾಗಿರಬೇಕು. ಒಂದು ಕಥೆಯನ್ನು ಹೇಳುವ ಮತ್ತು ವೀಕ್ಷಕರನ್ನು ಆ ಸ್ಥಳಗಳನ್ನು ತಿಳಿದುಕೊಳ್ಳಲು ಪ್ರೇರೇಪಿಸುವ ಮತ್ತು ಅನನ್ಯ ಛಾಯಾಚಿತ್ರವಾಗಿರಬೇಕು. ಪ್ರತಿಯೊಂದು ಛಾಯಾಚಿತ್ರವು 5 ಎಂಬಿ ಗಿಂತ ಕಡಿಮೆಯಿಲ್ಲದ ಗಾತ್ರ ಅಥವಾ ಉದ್ದನೆಯ ಬದಿಯಲ್ಲಿ 3,000 ಪಿಕ್ಸೆಲ್‌ಗಳು ಮತ್ತು ಉತ್ತಮ ಗುಣಮಟ್ಟದ ಸಂಕೋಚನದೊಂದಿಗೆ ಜೆ.ಪಿ.ಇ.ಜಿ ಸ್ವರೂಪ ಹೊಂದಿರಬೇಕು. ಪ್ರತಿ ವಿಭಾಗದಲ್ಲಿ ಓರ್ವ ಅಭ್ಯರ್ಥಿಯು ಗರಿಷ್ಠ 3 ಛಾಯಾಚಿತ್ರಗಳನ್ನು ಸಲ್ಲಿಸಬಹುದಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News