ಆಳಂದ | ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿ ಆಚರಣೆ

Update: 2025-04-14 18:58 IST
ಆಳಂದ | ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿ ಆಚರಣೆ
  • whatsapp icon

ಕಲಬುರಗಿ : ಆಳಂದ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸೋಮವಾರ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ 134ನೇ ಜಯಂತಿಯನ್ನು ಸರ್ಕಾರಿ ಕಚೇರಿ ಮತ್ತು ಸಂಘ ಸಂಸ್ಥೆಗಳಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು.

ಆಳಂದ ಪಟ್ಟಣದ ಹೊರವಲಯದ ತಾಲೂಕು ಆಡಳಿತಸೌಧ ಆವರಣದಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ವಿಶ್ವಗುರು ಬಸವಣ್ಣನವರ ಪ್ರತಿಮೆಗಳಿಗೆ ಮಾಲಾರ್ಪಣೆ ಕೈಗೊಳ್ಳುವ ಮೂಲಕ ಶಾಸಕ ಬಿ.ಆರ್.ಪಾಟೀಲ್‌ ಅವರು ಜಯಂತಿ ಆಚರಣೆಗೆ ಚಾಲನೆ ನೀಡಿದರು.

ಬಳಿಕ ಪಟ್ಟಣದ ಶ್ರೀರಾಮ ಮಾರುಕಟ್ಟೆಯಲ್ಲಿ ತಾಲೂಕು ಆಡಳಿತ, ಸಮಾಜ ಕಲ್ಯಾಣ ಮತ್ತು ಪುರಸಭೆ ಆಶ್ರಯದಲ್ಲಿ ನಡೆದ ಜಯಂತಿ ಸಮಾರಂಭವನ್ನು ಶಾಸಕರು ಉದ್ಘಾಟಿಸಿದರು.

ಸಾನ್ನಿಧ್ಯ ವಹಿಸಿದ್ದ ಉಸ್ತುರಿ ಧುತ್ತರಗಾಂವ ಮಠದ ವಿಶ್ವನಾಥ ಕೋರಣೇಶ್ವರ ಮಹಾಸ್ವಾಮಿಗಳು ಮಾತನಾಡಿ, "ಅಂಬೇಡ್ಕರ್ ಅವರು ಶಿಕ್ಷಣವನ್ನು ಒಂದು ಆಯುಧವೆಂದು ಕಂಡರು. ಇಂದಿನ ಯುವಕರು ಶಿಕ್ಷಣ ಮತ್ತು ಜ್ಞಾನದ ಮೂಲಕ ಸಮಾಜವನ್ನು ಪರಿವರ್ತಿಸಬೇಕು. ಅವರ ಆದರ್ಶಗಳನ್ನು ಕೇವಲ ಭಾಷಣದಲ್ಲಿ ಉಲ್ಲೇಖಿಸದೆ, ನಮ್ಮ ಕಾರ್ಯಗಳಲ್ಲಿ ಪ್ರತಿಫಲಿಸಬೇಕು," ಎಂದು ಸಲಹೆ ನೀಡಿದರು.

ವೇದಿಕೆಯಲ್ಲಿ ಪುರಸಭೆ ಅಧ್ಯಕ್ಷ ಫೀರುದೋಸ್ ಅನ್ಸಾರಿ, ಉಪಾಧ್ಯಕ್ಷೆ ಕವಿತಾ ಎಸ್.ನಾಯಕ್, ಹಿರಿಯ ಮುಖಂಡ ದಯಾನಂದ್ ಶೆರಿಕಾರ್, ಪ್ರಕಾಶ್ ಮೂಲಭಾರತಿ, ಪಾಂಡುರಂಗ ಮೊದಲೆ, ಜಿಪಂ ಮಾಜಿ ಸದಸ್ಯ ಸದ್ಧರಾಮ ಪ್ಯಾಟಿ, ತಾಪಂ ಇಒ ಮಾನಪ್ಪ ಕಟ್ಟಿಮನಿ, ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ, ಡಿವೈಎಸ್‌ಪಿ ಗೋಪಿ ಬಿ.ಆರ್., ಸಮಾಜ ಕಲ್ಯಾಣ ಅಧಿಕಾರಿ ವಿಜಯಲಕ್ಷ್ಮಿ ಕೊಳ್ಕರ್, ಸಮಿತಿಯ ಅಧ್ಯಕ್ಷರು, ತಹಶೀಲ್ದಾರ್ ಅಣ್ಣಾರಾವ್ ಪಾಟೀಲ್, ಸಿಡಿಪಿಒ ಶ್ರೀಕಾಂತ್ ಮೇಂಗಜಿ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.

ಪ್ರಾಧ್ಯಾಪಕ ಡಾ.ಅರುಣ ಜೋಳದಕುಡ್ಲಿ, ಮುಖ್ಯ ಶಿಕ್ಷಕ ಜೀತೆಂದ್ರ ತಳವಾರ ಅವರು ಉಪನ್ಯಾಸ ನೀಡಿದರು. ಚಂದ್ರಕಾಂತ್ ಎನ್.ಬಬಲಾದಕರ್ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News