ಅಫಜಲ್ಪುರ | ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134ನೇ ಜಯಂತಿ ಆಚರಣೆ

ಕಲಬುರಗಿ : ಅಫಜಲ್ಪುರ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ, ತಾಲೂಕು ಅಂಬೇಡ್ಕರ್ ಜಯಂತಿ ಉತ್ಸವ ಸಮಿತಿ ಅಫಜಲ್ಪುರ ಇವರ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ ಭಾರತರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134ನೇ ಜಯಂತಿಯನ್ನು ಇಲ್ಲಿನ ಅಂಬೇಡ್ಕರ್ ಉದ್ಯಾನದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಎಂ.ವೈ.ಪಾಟೀಲ, ಬಾಬಾ ಸಾಹೇಬರು ಮಾಡಿದಂತಹ ತ್ಯಾಗದಿಂದ ಇಂದು ನಾವೆಲ್ಲರೂ ಈ ಪ್ರಜಾಪ್ರಭುತ್ವವನ್ನು ಅಡೆತಡೆ ಇಲ್ಲದೆ ಅನುಭವಿಸುತ್ತಾ ಇದ್ದೇವೆ. ತುಳಿತಕ್ಕೆ ಒಳಗಾದ ಸಮುದಾಯಗಳು ಬಾಬಾ ಸಾಹೇಬರ ತ್ಯಾಗವನ್ನು ನೆನಪಿಸಿಕೊಳ್ಳಬೇಕಾಗಿದೆ ಮತ್ತು ಅವರು ಕಂಡ ಕನಸಿನ ಸಮಾಜವನ್ನು ಕಟ್ಟಬೇಕಾಗಿದೆ ಎಂದು ಹೇಳಿದರು.
ಮಾಜಿ ಸಚಿವ ಮತ್ತು ಕಾಂಗ್ರೆಸ್ ಮುಖಂಡರಾದ ಮಾಲಿಕಯ್ಯ. ವಿ. ಗುತ್ತೇದಾರ್ ಅವರು ಮಾತನಾಡಿ, ಬಾಬಾ ಸಾಹೇಬರ ತತ್ವ ಇಡೀ ಭಾರತದ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯನ್ನು ತರುವುದಾಗಿತ್ತು. ಅದಕ್ಕಾಗಿ ಬೇರೆ ಬೇರೆ ಸಮುದಾಯಗಳ ನಾಯಕರು ಇತರ ಸಮುದಾಯಗಳನ್ನು ಪ್ರೀತಿಸುವುದನ್ನು ಕಲಿಯಬೇಕು ಮತ್ತು ಪರಸ್ಪರ ಉತ್ಸವ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
ರಾಜು ಆರೇಕರ್, ಗೌತಮ್ ಕಳಸೇ ನವರ್ ಮಾತನಾಡಿದರು.
ಇದೇ ಸಂದರ್ಭದಲ್ಲಿ ತಾಲೂಕು ಆರೋಗ್ಯ ಇಲಾಖೆಯಿಂದ ಆರೋಗ್ಯ ಮೇಳವನ್ನು ಆಯೋಜಿಸಲಾಗಿತ್ತು. ಸುಮಾರು 30 ಜನ ರಕ್ತದಾನ ಮಾಡಿದರು. 200 ಕ್ಕೂ ಹೆಚ್ಚು ಜನರು ರಕ್ತ ಪರೀಕ್ಷೆ ಮಾಡಿಕೊಂಡರು. ಇದೇ ಸಂದರ್ಭದಲ್ಲಿ ಅನ್ನಸಂತರ್ಪಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಗ್ಯಾರಂಟಿಗಳ ಜಾರಿ ಸಮಿತಿಯ ಅಧ್ಯಕ್ಷರಾದ ಪ್ರಕಾಶ್ ಜಮಾದಾರ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಸಿದ್ಧಾರ್ಥ ಬಸರಿಗಿಡದ, ಮತಿನ್ ಅಹ್ಮದ್ ಪಟೇಲ್, ಮತ್ತು ಸಿದ್ದು ಸಿರಸಗಿ, ಪಪ್ಪು ಪಟೇಲ್ ಹಾಜರಿದ್ದರು.
ಅಧ್ಯಕ್ಷತೆಯನ್ನು ತಾಲೂಕು ದಂಡಾಧಿಕಾರಿಗಳಾದ ಸಂಜೀವ್ ಕುಮಾರ್ ದಾಸರ್ ವಹಿಸಿದ್ದರು. ತಾಲೂಕು ಆಡಳಿತದ ವತಿಯಿಂದ ತಾಲೂಕು ಪಂಚಾಯಿತಿ ಅಧಿಕಾರಿಗಳಾದ ಈರಣ್ಣ ಕೌಲಗಿ, ಪುರಸಭೆಯ ಅಧ್ಯಕ್ಷರಾದ ಸುಹಾಸಿನಿ ಖೇಳಗಿ, ಸಮಾಜ ಕಲ್ಯಾಣ ಅಧಿಕಾರಿ ಅಶೋಕ ನಾಯಕ್,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಪ್ರವೀಣ್ ಕುಮಾರ್, ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಬಾಬುರಾವ್ ಜ್ಯೋತಿ, ಸಹಾಯಕ ಕೃಷಿ ನಿರ್ದೇಶಕ ಗಡಗಿಮನಿ, ತಾಲೂಕ ಆರೋಗ್ಯ ಅಧಿಕಾರಿ ಚೇತನ್, ಕ್ಷೇತ್ರ ಶಿಕ್ಷಣಾಧಿಕಾರಿ ಯುವರಾಜ ಗಾಡಿ, ಪಶು ಸಂಗೋಪನ ಇಲಾಖೆಯ ಕೆ ಎಂ ಕೋಟೆ ಮತ್ತು ಪಟ್ಟಣದ ಮುಖಂಡರಾದ ರಾಜು ಪಾಟೀಲ್, ರವಿ ನಂದಿ, ಮಹಾಂತೇಶ್ ಬಡದಾಳ್, ಮಹಾಲಿಂಗ ಅಂಗಡಿ, ನಿ0ಗೂ ಚಲವಾದಿ, ಯಮನಪ್ಪ ಭಾಸಗಿ, ರಮೇಶ ಸೋಲೇಕರ್, ದಯಾನಂದ ದೊಡ್ಡ ಮನೆ, ಮಹಾಲಿಂಗ ಅಂಗಡಿ, ಸಿದ್ದು ಶಿರಸಗಿ ರಾಜು ಬಬಲಾದ್ ಅಶೋಕ ಗುಡ್ಡಡಗಿ ಸಿದ್ದಾರ್ಥ್, ಮಲ್ಲಯ್ಯ ಹೊಸಮಠ, ಶೈಲೇಶ ಗುಣಾರಿ, ಮತ್ತು ಅಂಬೇಡ್ಕರ್ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷ ಕುಮಾರ್ ಕೊಳಗೇರಿ, ಶ್ರೀಮಂತ ಬಿರಾದಾರ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರವಿ ಗೌರ ನಿರ್ವಹಣೆ ಮಾಡಿದರು. ಕುಮಾರ್ ಕೋಳಿಗೇರಿ ವಂದಿಸಿದರು.