ಕಲಬುರಗಿ | ಜಾವಳಗ ಜೆ ಗ್ರಾಮದಲ್ಲಿ ಸರ್ವಧರ್ಮದ ಶಾಂತಿಯ ಸಮ್ಮೇಳನ

Update: 2025-04-05 22:18 IST
Photo of Program
  • whatsapp icon

ಕಲಬುರಗಿ : ಸರ್ವ ಧರ್ಮಗಳೂ ಸಮಾನವೆಂಬ ಈ ಸಿದ್ದಾಂತವನ್ನು ಬೆಂಬಲಿಸುವ ಅನೇಕ ಪ್ರಯತ್ನಗಳನ್ನು ನಮ್ಮ ಮುಂದೆ ಇಟ್ಟರೂ, 'ಸರ್ವಧರ್ಮ ಸಮಭಾವ'ದ ಕೂಗು ಭಾರತೀಯ ಉಪಭೂಖಂಡವನ್ನು ದಾಟಿ ಪಾಶ್ಚಾತ್ಯ ರಾಷ್ಟ್ರಗಳಲ್ಲೂ ಮೊಳಗತೊಡಗಿತು ಎಂದು  ಕರುಣೇಶ್ವರ ಮಹಾಸ್ವಾಮಿಗಳು ಹೇಳಿದರು.

ಆಳಂದ ತಾಲೂಕಿನ ಜಾವಳಗ ಜೆ ಗ್ರಾಮದಲ್ಲಿ ನೂತನ ಜಾಮಿಯಾ ಮಸ್ಜಿದ್ ಉದ್ಘಾಟನೆ ಮತ್ತು ಸರ್ವಧರ್ಮದ ಶಾಂತಿಯ ಸಮ್ಮೇಳನ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.

ಸರ್ವಧರ್ಮ ಪ್ರತಿಪಾದಕರಾದ  ಕರುಣೇಶ್ವರ ಮಹಾಸ್ವಾಮಿಗಳು ಆಳಂದ ಮತ್ತು ಅಭಿನವ ಶಿವಲಿಂಗ ಮಹಾಸ್ವಾಮಿಗಳು, ಮಾದನ್ ಹಿಪ್ಪರಗ  ಅಮರ್ ಜ್ಯೋತಿ ಬಂತೆಜಿ ಬುದ್ಧ ವಿಹಾರ ಬೆಳಮಗಿ, ಸಿಖ್ ಧರ್ಮದ ಮುಖ್ಯಸ್ಥರಾದ ಜಸವೀರ್ ಸಿಂಗ್, ಮತ್ತು ಗುರುದ್ವಾರದ ಉಪಾಧ್ಯಕ್ಷರಾದ ಗುರುವಿರ್ ಸಿಂಗ್, ಜೈನ್ ಧರ್ಮದ ನೇಮೀನಾಥ್, ಕ್ರಿಶ್ಚಿಯನ್ ಧರ್ಮದ ಯಶವಂತ್ ಕೋಟೆ, ಸಮಾನತೆಯ ಪ್ರತಿಪಾದಕರಾದ ಮಕ್ಕಾ ಮಸ್ಜಿದ್ ಲಾತೂರ್ ಹಜರತ್ ಮೌಲಾನಾ ಮುಸ್ತಫ ಸಾಹೇಬ್, ಮಜಾರಿ ಇಮಾಮ್ ದಾರುಲ್ ಉಲ್ ಉಲೂಮ್ ಉಮ್ಮರ್ಗ ಮುಖ್ಯಸ್ಥ ಹಜರತ್ ಮೌಲನ ಗುಲಾಂನಬಿ ಸಾಹೇಬ್ ಖಾಸ್ಮಿ ಸರ್ವಧರ್ಮದ ಏಕತೆಯ ಸಂದೇಶ ನೀಡಿದರು.

ಕಾರ್ಯಕ್ರಮದಲ್ಲಿ ಹಿಂದೂ, ಮುಸ್ಲಿಂ, ಸಿಖ್, ಕ್ರಿಶ್ಚಿಯನ್, ಎಲ್ಲಾ ಧರ್ಮದ ಬಗ್ಗೆ ವಿಸ್ತಾರವಾಗಿ ತಿಳಿ ಹೇಳಲಾಯಿತು. ನನ್ನ ಧರ್ಮವನ್ನು ಪಾಲಿಸು ಅನ್ಯ ಧರ್ಮವನ್ನು ಗೌರವಿಸು ಎಂದು ಮೌಲಾನ ಮಜಾರಿ ಅವರು ಹೇಳಿದರು.

ಮೆಹರಾಜ್ ಪಟೇಲ್ ತಾವರಗೇರಾ ಕಾರ್ಯಕ್ರಮವನ್ನು ನಿರೂಪಿಸಿದರು, ಸ್ವಾಗತ ಭಾಷಣವನ್ನು ರಾಜದಾರ್ ಪಾಷಾ ಅವರು ಮಾಡಿದರು. ಮುಖ್ಯ ಅತಿಥಿಗಳಾಗಿ  ಯೂಸುಫ್ ಜಾಫರ್ ಪಟೇಲ್ ಕುಂದನೂರ್, ಸೈಯದ್ ಇಜಾಜ್ ಅಲಿ ನಾಮದಾರ್, ಇಲ್ಯಾಸ್ ಪಟೇಲ್, ಬಾಬಾ ಪಟೇಲ್ ಕೂಡಿ, ಜಿಲಾನ್ ಗುತ್ತೇದಾರ್, ನಜೀರ್ ಪಟೇಲ್, ಮೋದಿನ್ ಪಟೇಲ್ ಅಣಬಿ ಹಾಜರಿದ್ದರು.

ಕಾರ್ಯಕ್ರಮದಲ್ಲಿ ಸಮಸ್ತ ಊರಿನ ಎಲ್ಲ ಧರ್ಮದ ಪ್ರಮುಖ ಗಣ್ಯರು ಮತ್ತು ಸುತ್ತಮುತ್ತಲಿನ ಗ್ರಾಮದ ಗಣ್ಯರು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News