ಕಲಬುರಗಿ | ಡಾ.ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ ನೀಡಿ : ತಿಪ್ಪಣ್ಣಪ್ಪ ಕಮಕನೂರ

ಕಲಬುರಗಿ : ಸಿದ್ಧಗಂಗಾ ಮಠದ ಪೂಜ್ಯ ಶ್ರೀ ಡಾ.ಶಿವಕುಮಾರ ಮಹಾಸ್ವಾಮಿಗಳಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಲು ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ ಅವರು ಭಾರತ ಸರ್ಕಾರಕ್ಕೆ ಒತ್ತಾಯಿಸಿದರು.
ನಗರದ ಕನ್ನಡ ಭವನದ ಕಲಾ ಸೌಧದಲ್ಲಿ ಮಂಗಳವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿಯ ಸಹಯೋಗದೊಂದಿಗೆ ಏರ್ಪಡಿಸಿದ ಕರ್ನಾಟಕ ರತ್ನ-ಶತಾಯಿಷಿ ಶ್ರೀ ಡಾ. ಶಿವಕುಮಾರ ಮನಹಾಸ್ವಾಮಿಗಲವರ 118 ನೇ ಜನ್ಮದಿನದ ನಿಮಿತ್ತಮ ಸಾಧಕರಿಗೆ ಸಿದ್ಧಿಯಗಂಗಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಶ್ರೀ ಡಾ.ಶಿವಕುಮಾರ ಮಹಾಸ್ವಾಮಿ ಅವರು ಅನ್ನ, ಶಿಕ್ಷಣ ನೀಡಿ ಲಕ್ಷಾಂತರ ವಿದ್ಯಾರ್ಥಿಗಳ ಬದುಕಿಗೆ ಆಸರೆಯಾಗಿ ನಿಂತ ಸಂತ-ಮಹಾತ್ಮರು ಶ್ರೀಗಳಾಗಿದ್ದಾರೆ. ಸಿದ್ಧಗಂಗಾ ಶ್ರೀಗಳು ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಕನ್ನಡ ಭವನದ ಆವರಣದಲ್ಲಿನ ಸಾಹಿತ್ಯ ಮಂಟಪಕ್ಕೆ ಶೆಡ್ ನಿರ್ಮಾಣಕ್ಕಾಗಿ 5 ಲಕ್ಷ ರೂ. ಗಳ ಅನುದಾನವನ್ನು ನೀಡಿ ಪರಿಷತ್ತಿನ ಸಾಹಿತ್ಯಕ ಚಟುವಟಿಕೆಗಳಿಗೆ ಸಹಕರಿಸುವುದಾಗಿ ಭರವಸೆ ನೀಡಿದರು. ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಯವರು ಅಧ್ಯಕ್ಷರಾದ ನಂತರ ಎಲ್ಲ ಜಾತಿ-ಜನಾಂಗದವರರನ್ನು ಒಟ್ಟುಗೂಡಿಸಿಕೊಂಡು ಕಾರ್ಯನಿರ್ವಹಿಸುವ ಮೂಲಕ ಪರಿಷತ್ತನ್ನು ಅನುಭವ ಮಂಟಪದ ರೀತಿಯಲ್ಲಿ ಕನ್ನಡ ಕಟ್ಟುವ ಕಾಯಕ ಮಾಡುತ್ತಿದ್ದಾರೆ ಎಂದು ಮನದುಂಬಿ ಹೇಳಿದರು.
ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಸಿದ್ಧಗಂಗಾ ಮಠದ ಶ್ರೀ ಡಾ.ಶಿವಕುಮಾರ ಮಹಾಸ್ವಾಮಿಗಳು ಶತಮಾನ ಕಂಡ ಅಪರೂಪದ ಶರಣರಾಗಿದ್ದಾರೆ. ಜಾತಿ, ಧರ್ಮ, ಬೇಧವನ್ನು ಮಾಡದೇ ಎಲ್ಲರೂ ಒಂದೇ ಎಂಬ ಭಾವನೆಯಿಂದ ಹಸಿದು ಬಂದ ಒಡಲುಗಳಿಗೆ ಹೊಟ್ಟೆ ತುಂಬಿಸಿದ ಮಹಾನ್ ಸಂತರಾಗಿದ್ದಾರೆ. ಅಂಥ ಶ್ರೇಷ್ಠ ಸಂತ ಇಂದಿನ ಹೊಸ ಜನಾಂಗಕ್ಕೆ ಪ್ರೇರಣೆಯಾಗಬೇಕೆಂದರು.
ಪತ್ರಕರ್ತರ ಸಂಗದ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ್, ಮುಖಂಡರಾದ ರವಿ ಬಿರಾದಾರ ಕಮಲಾಪೂರ, ಬಸವರಾಜ ಬಿರಬಿಟ್ಟೆ, ಅಕಾಡೆಮಿ ಅಧ್ಯಕ್ಷ ಬಿ.ಎಂ.ಪಾಟೀಲ ಕಲ್ಲೂರ ಮಾತನಾಡಿದರು. ಜಿಲ್ಲಾ ಕಸಾಪ ದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಶರಣರಾಜ ಛಪ್ಪರಬಂದಿ, ಧರ್ಮರಾಜ ಜವಳಿ, ರಾಜೇಂದ್ರ ಮಾಡಬೂಳ, ಗಣೇಶ ಚಿನ್ನಾಕಾರ, ಶಕುಂತಲಾ ಪಾಟೀಲ,. ಜ್ಯೋತಿ ಕೋಟನೂರ, ಬಾಬುರಾವ ಪಾಟೀಲ, ರವಿಕುಮಾರ ಶಹಾಪುರಕರ್, ಸಂತೋಷ ಕುಡಳ್ಳಿ, ಶರಣಬಸಪ್ಪ ಕೋಬಾಳ, ಎಸ್.ಕೆ. ಬಿರಾದಾರ, ಅಮೃತಪ್ಪ ಅಣೂರ ಕವಿಗಳು ಇತರರಿದ್ದರು.
ವಿವಿಧ ಕ್ಷೇತ್ರದ ಪ್ರಮುಖರಾದ ರಾಜೇಶ ಬಾಲಕಿಶನ್ ವರ್ಮಾ, ಕಲ್ಯಾಣಕುಮಾರ ಸಂಗಾವಿ, ಡಾ.ಸಿದ್ದು ಪಾಟೀಲ, ಡಾ.ಆರೀಫ್ ರಾಜಾ ಅಹ್ಮದ್, ಹಣಮಂತ್ರಾಯಗೌಡ ಕಪನುರ ಉದನೂರ, ಮಲ್ಲಿಕಾರ್ಜುನ ಸಾರವಾಡ ಅವರನ್ನು ಸಿದ್ಧಿಯಗಂಗಾ ಪ್ರಶಸ್ತಿಯನ್ನು ನೀಡಿ ಸತ್ಕರಿಸಲಾಯಿತು.