ತೊಗರಿ ಖರೀದಿ; ಹಮಾಲಿ, ಹೆಚ್ಚಿನ ತೊಗರಿ ಕೇಳಿದಲ್ಲಿ ದೂರು ನೀಡಿ : ಜಿಲ್ಲಾಧಿಕಾರಿ

ಕಲಬುರಗಿ : ಬೆಂಬಲ ಬೆಲೆ ಯೋಜನೆಯಡಿ ಸ್ಥಾಪಿಸಲಾದ ತೊಗರಿ ಖರೀದಿ ಕೇಂದ್ರಗಳಲ್ಲಿ ಪ್ರತಿ ಕ್ವಿಂಟಾಲ್ ತೊಗರಿಗೆ 100 ರೂ. ಹಮಾಲಿ ಮತ್ತು ಪ್ರತಿ ಕ್ವಿಂಟಾಲಿಗೆ 2 ಕೆ.ಜಿ ತೊಗರಿ ರೈತರಿಂದ ಪಡೆಯುತ್ತಿರುವ ದೂರು ಕೇಳಿ ಬರುತ್ತಿದ್ದು, ರೈತರ ಯಾವುದೇ ಕಾರಣಕ್ಕೂ ಹಮಾಲಿ ಮೊತ್ತ ಅಥವಾ ಕ್ವಿಂಟಾಲಿಗೆ 2 ಕೆ.ಜಿ ತೊಗರಿ ಸೂಟು ನೀಡಬಾರದೆಂದು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಜಿಲ್ಲೆಯ ರೈತರಲ್ಲಿ ಮನವಿ ಮಾಡಿದ್ದಾರೆ.
ರೈತರು ಪ್ರತಿ 50 ಕೆ.ಜಿ ಚೀಲಕ್ಕೆ ಚೀಲದ ತೂಕ 600 ಗ್ರಾಂ ಮಾತ್ರ ಹೆಚ್ಚುವರಿಯಾಗಿ ತೊಗರಿ ನೀಡಬೇಕಿದ್ದು, ಅದಕ್ಕಿಂತ ಹೆಚ್ಚು ನೀಡಬೇಕಾಗಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಒಂದು ವೇಳೆ ಯಾವುದೇ ಖರೀದಿ ಕೇಂದ್ರಗಳಲ್ಲಿ ಪ್ರತಿ ಕ್ವಿಂಟಾಲ್ ತೊಗರಿಗೆ 100 ರೂ. ಹಮಾಲಿ ಅಥವಾ ಪ್ರತಿ ಕ್ವಿಂಟಾಲಿಗೆ 2 ಕೆ.ಜಿ ತೊಗರಿ ಸೂಟು ನೀಡುವಂತೆ ಕೇಳಿದಲ್ಲಿ ಕೂಡಲೇ ರೈತರು ತಾಲೂಕಿನ ತಹಶೀಲ್ದಾರರು, ಸಹಾಯಕ ಕೃಷಿ ನಿರ್ದೇಶಕಕು ಅಥವಾ ಕೃಷಿ ಮಾರುಕಟ್ಟೆ ಇಲಾಖೆಯ ಸಹಾಯಕ ನಿರ್ದೇಶಕರು ಕೃಷಿ ಮಾರುಕಟ್ಟೆ ಇಲಾಖೆ ಅಥವಾ ಸಂಬಂಧಿತ ತಾಲೂಕು ನೋಡಲ್ ಅಧಿಕಾರಿಗಳಲ್ಲಿ ದೂರು ಸಲ್ಲಿಸುವಂತೆ ತಿಳಿಸಿದ್ದಾರೆ.