ಕಲಬುರಗಿ | ಸರಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ 4 ಲಕ್ಷ ರೂ. ಮೌಲ್ಯದ ವಸ್ತು ಕಳ್ಳತನ

ಕಲಬುರಗಿ : 2 ತಿಂಗಳಿಂದ ಇಲ್ಲಿನ ಜಿಮ್ಸ್ ಆವರಣದಲ್ಲಿರುವ ಜಿಲ್ಲಾ ಸರಕಾರಿ ಆಸ್ಪತ್ರೆಯ ಹಳೆ ಕಟ್ಟಡವನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದ್ದು, ಜಿಮ್ಸ್ ಆಸ್ಪತ್ರೆಯ ಕ್ಯಾಂಪಸ್ ಲ್ಲಿ ಇರಿಸಿದ್ದ ಆಕ್ಸಿಜನ್ ಪೈಪ್‌ಗಳು ಸೇರಿದಂತೆ ಸುಮಾರು 4 ಲಕ್ಷ ರೂ.ಮೌಲ್ಯದ ವಸ್ತುಗಳನ್ನು ಕಳ್ಳರು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಜಿಮ್ಸ್ ಆಸ್ಪತ್ರೆಯ ಕ್ಯಾಂಪಸ್ ನಲ್ಲಿ ಇರಿಸಿದ್ದ 10 ಆಕ್ಸಿಜನ್ ಪೈಪ್, ಏರ್ ವ್ಯಾಕಿಂ ಮಷಿನ್ ಪೈಪ್, 2 ಹಳೆಯ ಎಸಿ ಔಟ್ ಡೋರ್ ಯುನಿಜಗಳು ಮತ್ತು ಅದಕ್ಕೆ ಸಂಬಂಧಿಸಿದ 5 ಕಾಪರ್ ಪೈಡ್ ಗಳು ಮತ್ತು ಟ್ರಾಮಾ ಕೇರ್ ಸೆಂಟರ್ ಹಿಂಭಾಗದಲ್ಲಿ ಇಟ್ಟಿದ್ದ 1 ಮೀಟರಿನ 26 ಟೇಲ್ ಪೈಪ್‌ಗಳು ಮತ್ತು 13 ಆಕ್ಸಿಜನ್ ಪೈಟ್ ಗಳು ಸೇರಿದಂತೆ 4 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕಳವು ಮಾಡಲಾಗಿದೆ ಎಂದು ಆಸ್ಪತ್ರೆಯ ಶಸ್ತ್ರ ಚಿಕಿತ್ಸೆ ವಿಭಾಗದ ಪ್ರಾಧ್ಯಾಪಕ ಮತ್ತು ವೈದ್ಯಕೀಯ ಅಧೀಕ್ಷಕರಾದ ಡಾ.ಶಿವಕುಮಾರ ಸಿ.ಆರ್. ದೂರು ನೀಡಿದ್ದಾರೆ.
ವೈದ್ಯರ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಬ್ರಹ್ಮಪುರ ಠಾಣೆಯ ಪೊಲೀಸರು, ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.