ಕಲಬುರಗಿ | ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

ಕಲಬುರಗಿ : ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ದಿ ನಿಗಮದಿಂದ 2024-25 ನೇ ಸಾಲಿಗೆ ಅನುಷ್ಟಾನಗೊಳಿಸುತ್ತಿರುವ ಕೆಳಕಂಡ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ ಪಡೆಯಲು ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಮತ್ತು ಅವರ ಅವಲಂಭಿತ ಕುಟುಂಬದ ಸದಸ್ಯರಿಂದ ಆಫ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ದಿ ನಿಗಮದ ಕಲಬುರಗಿ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.
ಸ್ವಯಂ ಉದ್ಯೋಗ ನೇರಸಾಲ 1 ಲಕ್ಷ ಯೋಜನೆ, ಸ್ವಯಂ ಉದ್ಯೋಗ ಶೀಲತಾ (ಐಎಸ್‍ಬಿ) 2 ಲಕ್ಷ ರೂ. ಯೋಜನೆ, ಸ್ವಾವಲಂಬಿ ಸಾರಥಿ ಸರಕು ಸಾಕಾಣಿಕೆ ವಾಹನ ಯೋಜನೆ ಹಾಗೂ ಲ್ಯಾಪ್‍ಟಾಪ್ ವಿತರಣೆ ಯೋಜನೆಗಳಡಿ ಅರ್ಜಿ ಸಲ್ಲಿಸಬಹುದಾಗಿದೆ. ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಮತ್ತು ಅವರ ಅವಲಂಭಿತ ಕುಟುಂಬದ ಫಲಾನುಭವಿಗಳಿಗೆ 2025ರ ಏ. 7 ರೊಳಗಾಗಿ ಅವಶ್ಯಕ ದಾಖಲೆಗಳೊಂದಿಗೆ ಆಫ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಅವಕಾಶ ಕಲ್ಪಿಸಲಾಗಿದೆ.
ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಲು ನಿಗಮದ ಯೋಜನೆಗಳ ಅನುಷ್ಟಾನದ ಕುರಿತು ಸರ್ಕಾರದ ಮಾರ್ಗಸೂಚಿಗಳು ಮತ್ತು ಯೋಜನೆಯ ವಿವರಗಳನ್ನು www.ksskdc.kar.nic.in ವೆಬ್‍ಸೈಟ್‍ದಿಂದ ಪಡೆಯಬಹುದಾಗಿದೆ. ಮತ್ತಿತರ ಮಾಹಿತಿಗಾಗಿ ಹೆಚ್ಚಿನ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರನ್ನು ಹಾಗೂ ಮೊಬೈಲ್ ಸಂಖ್ಯೆ ಸಂಖ್ಯೆ 8050854115 ಗೆ ಸಂಪರ್ಕಿಸಲು ಕೋರಲಾಗಿದೆ.