ಕಲಬುರಗಿ | ಅಪರಾಧ ನಿಯಂತ್ರಣ, ಶಾಂತಿ ಸೌಹಾರ್ದತೆ ಕಾಪಾಡುವುದು ಪೊಲೀಸರ ಆದ್ಯ ಕರ್ತವ್ಯ : ಚಂದ್ರಕಾಂತ ಸೋನಾರ

ಕಲಬುರಗಿ : ನಮ್ಮ ಪೊಲೀಸ್ ಇಲಾಖೆಯೂ ಕೇವಲ ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡುವುದು ಅಷ್ಟೆ ಅಲ್ಲ, ಶಿಸ್ತು ಪಾಲನೆ ಸಮಾಜದಲ್ಲಿ ಅಪರಾಧ ನಿಯಂತ್ರಣ, ಶಾಂತಿ ಸೌಹಾರ್ದತೆ ಕಾಪಾಡುವುದು, ಸಾರ್ವಜನಿಕರ ಆಸ್ತಿ ಪಾಸ್ತಿ ರಕ್ಷಣೆ ಮಾಡುವುದು ಆದ್ಯ ಕರ್ತವ್ಯವಾಗಿದೆ ಎಂದು ಮಹಾಗಾಂವ್ ಪೊಲೀಸ್ ಠಾಣೆಯ ನಿವೃತ್ತಿ ಪಿ.ಎಸ್.ಐ. ಚಂದ್ರಕಾಂತ ಸೋನಾರ ಅವರು ಹೇಳಿದರು.
ಮಂಗಳವಾರದಂದು ಸಶಸ್ತ್ರ ಪೊಲೀಸ್ ಕವಾಯತು ಮೈದಾನದಲ್ಲಿ ಪೊಲೀಸ್ ಧ್ವಜ ದಿನಾಚರಣೆ ಅಂಗವಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಪರೇಡ್ ವಂದನೆ ಸ್ವೀಕರಿಸಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ನಾನು ಪೊಲೀಸ್ ಇಲಾಖೆಯ ಸೇವೆಗೆ ಇದೇ ಡಿ.ಎ.ಆರ್. ಕೇಂದ್ರಸ್ಥಾನದಲ್ಲಿ 1992 ಫೆ.20 ರಂದು ಪೊಲೀಸ್ ಕಾನ್‌ಸ್ಟೇಬಲ್ ಆಗಿ, ನಂತರ ಮುಖ್ಯ ಪೇದೆ, ಎ.ಎಸ್.ಐ. ಮತ್ತು ಪಿ.ಎಸ್.ಐ. ಪದೋನ್ನತಿ ಹೊಂದಿ 32 ವರ್ಷಗಳ ಸುದಿರ್ಘ ಸೇವೆ ಸಲ್ಲಿಸಿದ್ದೇನೆ ಎಂದರು.
ಪೊಲೀಸ್ ಅಧೀಕ್ಷ ಅಡ್ಡೂರು ಶ್ರೀನಿವಾಸಲು ಸ್ವಾಗತಿಸಿ ಮಾತನಾಡಿ, ಪೋಲಿಸ್ ಧ್ವಜಗಳನ್ನ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಿಗೆ ಕಳುಹಿಸಲಾಗುತ್ತಿದ್ದು, ಮಾರಾಟ ಮಾಡಿ ಬಂದತಂಹ ಹಣದಿಂದ 50 ಪ್ರತಿಶತ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿಗಾಗಿ ಮತ್ತು 50 ಪ್ರತಿಶತ ಕೇಂದ್ರ ಪೊಲೀಸ್ ಕಲ್ಯಾಣ ನಿಧಿಗೆ ಜಮಾ ಮಾಡಲಾಗುತ್ತಿರುತ್ತದೆ ಇದರಿಂದ ನಿವೃತ್ತ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಅನುಕೂಲವಾಲಿದೆ ಎಂದರು.
ನಗರ ಪೋಲಿಸ್ ಆಯುಕ್ತ ಶರಣಪ್ಪ ಎಸ್.ಡಿ. ಅಧ್ಯಕ್ಷತೆ ವಹಿಸಿ ಮಾತನಾಡಿ, ಇತ್ತೀಚಿನ ದಿನಗಳ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ಅನೇಕ ಕಾಯಿಲೆಗಳ ಪರೀಕ್ಷೆ ತಪಾಸಣೆ ಈಗಾಗಲೇ ಕೈಗೊಳ್ಳಲಾಗಿದೆ. ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಲಾಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಪೊಲೀಸ್ ಧ್ವಜಗಳನ್ನು ಬಿಡುಗಡೆಗೊಳಿಸಿದರು. ಕಲಬುರಗಿ ಜಿಲ್ಲೆಯ ಮತ್ತು ಕಲಬುರಗಿ ನಗರ ನಿವೃತ್ತ ಪೊಲೀಸ್ ಹಾಗೂ ಸೇವೆಯಲ್ಲಿರರುವ ಪೊಲೀಸ್ ಅಧಿಕಾರಿ ಸಿಬ್ಬಂಧಿಗಳಿಗೆ ಪೋಲೀಸ್ ಕಲ್ಯಾಣ ನಿಧಿಯಿಂದ ನೀಡಲಾದ ಆರ್ಥಿಕ ಸಹಾಯದ ಚೆಕ್ ವಿತರಣೆ ಮಾಡಿದರು.
ಉಪ ಪೊಲೀಸ್ ಆಯುಕ್ತ (ಕಾ & ಸು ) ಕನಿಕಾ ಸಿಕ್ರಿವಾಲ್ ವಂದನಾರ್ಪಣೆ ಕೈಗೊಂಡರು. ಕಲಬುರಗಿ ಜಿಲ್ಲೆಯ ಡಿ.ಎ.ಆರ್. ಘಟಕ ಚಂದ್ರಶೇಖರ ಆರ್.ಪಿ.ಐ ಪಂಥ ಸಂಚಲನ ನಡೆಸಿದರು.
ಇದೇ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ಶಿಂಧೆ ಅವಿನಾಶ ಸಂಜೀವನ, ಪೋಲಿಸ್ ತರಬೇತಿ ಮಹಾವಿದ್ಯಾಲಯ ಪ್ರಾಂಶುಪಾಲರು ಮತ್ತು ಪೋಲಿಸ್ ಅಧೀಕ್ಷಕರು ಡೆಕ್ಕಾ ಕಿಶೋರ ಬಾಬು, ಹೆಚ್ಚುವರಿ ಪೊಲೀಸ್ ಆಧೀಕ್ಷಕ ಮಹೇಶ ಮೇಘಣ್ಣನವರ, ನಗರದ ಅಫರಾದ ಮತ್ತು ಸಂಚಾರ ವಿಭಾಗದ ಪೊಲೀಸ್ ಉಪ ಆಯುಕ್ತ ಪ್ರವೀನ ನಾಯಕ್, ಇದ್ದರು ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

