ಕಲಬುರಗಿ | ಕಳ್ಳತನ ಪ್ರಕರಣ ; ಮೂವರು ಮಹಿಳಾ ಆರೋಪಿಗಳ ಬಂಧನ : ಎಸ್ಪಿ ಅಡ್ಡೂರು ಶ್ರೀನಿವಾಸಲು

ಬಂಧಿತ ಆರೋಪಿಗಳು
ಕಲಬುರಗಿ : ಸೇಡಂ ಬಸ್ ನಿಲ್ದಾಣದಲ್ಲಿ ನಡೆದಿದ್ದ ಎರಡು ಸರಕಳ್ಳತನ ಪ್ರಕರಣ ಹಾಗೂ ಸುಲೇಪೇಟೆ ಗ್ರಾಮದ ಬಸ್ ನಿಲ್ದಾಣದಲ್ಲಿ ನಡೆದಿದ್ದ ಎರಡು ಪ್ರತ್ಯೇಕ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿ ನಗರದ ಬಾಬು ನಗರದ ಮೂವರು ಸರಗಳ್ಳಿಯರನ್ನು ಬಂಧಿಸಿ ಅವರಿಂದ 6 ಲಕ್ಷದ 70 ಸಾವಿರ ರೂ. ಮೌಲ್ಯದ ಆಭರಣವನ್ನು ಜಪ್ತಿ ಮಾಡಿಕೊಳ್ಳಲಾಗಿದೆಯೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅಡ್ಡೂರು ಶ್ರೀನಿವಾಸಲು ತಿಳಿಸಿದ್ದಾರೆ.
ನಗರದ ಪೊಲೀಸ್ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಲಬುರಗಿ ನಗರದ ಬಾಪುನಗರದ ನಿವಾಸಿಗಳಾದ ಏಕತಾ (24), ಕಿರಣ ಗಂಡ (30) ಹಾಗೂ ಸಿರ್ಮನ್ (26) ಬಂಧಿತ ಆರೋಪಿಗಳಾಗಿದ್ದು, ಸರಿತಾ ಹಾಗೂ ಕರೋನಾ ಎಂಬ ಇಬ್ಬರು ಮಹಿಳೆಯರು ತಲೆ ಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಹೇಳಿದರು.
ಬಂಧಿತರ ಗ್ಯಾಂಗ್ ರೈಲ್ವೆ, ಬಸ್ ನಿಲ್ದಾಣಗಳಲ್ಲಿ ಕಾಯುತ್ತಿದ್ದ ವೃದ್ಧ ಪ್ರಯಾಣಿಕರನ್ನೇ ಟಾರ್ಗೆಟ್ ಮಾಡುತ್ತಿದ್ದರು ಎಂದು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಎಎಸ್ಪಿ ಮಹೇಶ್ ಮೇಘಣ್ಣನವರ್ ಸೇರಿದಂತೆ ಮತ್ತಿತರ ಪೊಲೀಸ್ ಅಧಿಕಾರಿಗಳು ಇದ್ದರು.