ಅಂತರ್ ವಿಶ್ವವಿದ್ಯಾಲಯ ಪಿಂಕಾಕ್ ಸಿಲಾತ್ ಪಂದ್ಯಾಟದಲ್ಲಿ ಗುಲ್ಬರ್ಗಾ ವಿವಿ ಭಾಗಿ

ಕಲಬುರಗಿ : ಎ.14 ರಿಂದ 16 ರವರೆಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ಜರುಗಲಿರುವ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಪಿಂಕಾಕ್ ಸಿಲಾತ್ (ಪು & ಮ) ಪಂದ್ಯಾಟದಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯದ ತಂಡವು ಭಾಗವಹಿಸುತ್ತಿದೆ.
ತಂಡದ ನಾಯಕನಾಗಿ ಭಾಗಣ್ಣ ಮತ್ತು 8 ಜನ ತಂಡದ ಸದಸ್ಯರು ಭಾಗವಹಿಸುವರು. ತಂಡದ ವ್ಯವಸ್ಥಾಪಕರಾಗಿ/ತರಬೇತುದಾರರಾಗಿ ಸಿದ್ದರಾಮ ಬಿಜಾಪೂರ ದೈಹಿಕ ಶಿಕ್ಷಣ ಭೋದಕರು, ಎ.ವಿ.ಪಾಟೀಲ್ ಕಾಲೇಜು ಆಳಂದ ಇವರು ಭಾಗವಹಿಸುವರು.
ತಂಡದ ಯಶಸ್ವಿಗೆ ಗುಲ್ಬರ್ಗಾ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೊ.ಜಿ.ಶ್ರೀರಾಮಲು, ಕುಲಸಚಿವರಾದ ಪ್ರೊ.ರಮೇಶ ಲಂಡನಕರ್, ಡಾ.ಎನ್.ಜಿ.ಕಣ್ಣೂರ, ದೈಹಿಕ ಶಿಕ್ಷಣ ನಿರ್ದೇಶಕರು, ಮತ್ತು ಕುಲಸಚಿವರು (ಮೌಲ್ಯಮಾಪನ) ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ, ಡಾ.ಎಚ್.ಎಸ್.ಜಂಗೆ, ಸಂಯೋಜಕರು ಮತ್ತು ಪ್ರಾಂಶುಪಾಲರು, ದೈಹಿಕ ಶಿಕ್ಷಣ ವಿಭಾಗ, ಡಾ.ಚಂದ್ರಕಾಂತ ಬಿರಾದಾರ, ಪ್ರಶಾಂತಕುಮಾರ ಡಿ., ಅರುಣಕುಮಾರ ಎಚ್. ಇವರು ತಂಡಕ್ಕೆ ಶುಭ ಹಾರೈಸಿದ್ದಾರೆ.