ಕಲಬುರಗಿ | ಡಾ.ಬಾಬು ಜಗಜೀವನರಾಮ್ ಜಯಂತಿ ಪ್ರಯುಕ್ತ ವಿವಿಧ ಕಾರ್ಯಕ್ರಮಗಳ ಆಯೋಜನೆ

Update: 2025-04-02 16:52 IST
Photo of Press meet
  • whatsapp icon

ಕಲಬುರಗಿ : ಏ.5ರಂದು ಡಾ.ಬಾಬು ಜಗಜೀವನರಾಮ್ ರವರ 118ನೇ ಜಯಂತಿ ಪ್ರಯುಕ್ತವಾಗಿ ಕ್ರಿಕೆಟ್, ಪ್ರಬಂಧ ಸ್ಪರ್ಧೆ, ಬಹಿರಂಗ ಸಭೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ ಎಂದು ಜಯಂತ್ಸೋವ ಸಮಿತಿಯ ಅಧ್ಯಕ್ಷ ರಂಜೀತ ಆರ್.ಮೂಲಿಮನಿ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಮಾ.31 ರಿಂದ ಏ.2 ರವರೆಗೆ ನಗರದ ಎನ್.ವಿ.ಮೈದಾನದಲ್ಲಿ ಕ್ರಿಕೆಟ್ ಪಂದ್ಯಾವಳಿಯನ್ನು ಹಮ್ಮಿಕೊಂಡಿದ್ದ, ಇದರಲ್ಲಿ ಸುಮಾರು 20 ಬಡಾವಣೆಗಳ ತಂಡಗಳು ಪಾಲ್ಗೊಂಡಿವೆ. ವಿಜೇತರಿಗೆ ಪ್ರಥಮಾ ಬಹುಮಾನ 21,000 ರೂ. ದ್ವಿತೀಯ ಬಹುಮಾನ 11,000 ರೂ. ನಗದು ಹಣ ಸೇರಿದಂತೆ ಟ್ರೋಫಿ ನೀಡಲಾಗುತ್ತದೆ ಎಂದರು.

ಏ.3 ರಂದು ಬೆಳ್ಳಗೆ 11 ಗಂಟೆಗೆ ನಗರದ ಅನ್ನಪೂರ್ಣ ಕ್ರಾಸ್ ಹತ್ತಿರ ಇರುವ ಕಲಾ ಮಂಡಳದಲ್ಲಿ ಡಾ.ಬಾಬು ಜಗ ಜೀವನರಾಮ್ ಪ್ರಬಂಧ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿದ್ದು, ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಥಮ ಬಹುಮಾನ 5,000 ರೂ., ದ್ವಿತೀಯ ಬಹುಮಾನ 3,000 ರೂ., ತೃತೀಯ ಬಹುಮಾನ 2,000 ರೂ. ನಗದು ಹಣ ಹಾಗೂ ಬಹುಮಾನ ವಿತರಿಸಲಾಗುತ್ತದೆ ಎಂದರು.

ಏ. 4 ರಂದು ನಗರದ ಡಾ.ಬಾಬು ಜಗಜೀವನರಾಮ್ ಪ್ರತಿಮೆಯ ಮುಂಭಾಗದಲ್ಲಿ ಬಹಿರಂಗ ಸಭೆ ಆಯೋಜನೆ ಮಾಡಲಾಗಿದ್ದು, ಸಭೆಯಲ್ಲಿ ಶಿಕ್ಷಣ, ಕ್ರೀಡೆ, ಸಾಹಿತ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮುದಾಯದ ಸಾಧಕರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಸಾಹಿತಿ ಮೈಸೂರಿನ ದಾಸನೂರ ಕೂಸಣ್ಣ ಅವರು ಡಾ.ಬಾಬು ಜಗಜೀವನರಾಮ್ ಕುರಿತು ಉಪನ್ಯಾಸ ನೀಡುವರು ಎಂದು ಹೇಳಿದರು.

ಏ.5 ರಂದು ಸಂಜೆ 4 ಗಂಟೆಗೆ ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಿಂದ ಡಾ.ಬಾಬು ಜಗಜೀವನರಾಮ್ ಪ್ರತಿಮೆವರೆಗೆ ವಿವಿಧ ಕಲಾ ತಂಡಗಳೊಂದಿಗೆ ಬಾಬುಜಿ ಅವರ ಭಾವಚಿತ್ರದ ಭವ್ಯ ಮೆರವಣಿಗೆ ಹೊರಡಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಶ್ಯಾಮ ನಾಟಿಕರ, ರಾಜು ವಾಡೇಕರ, ಬಾಬು ಸಠಾಣ, ನಾಗರಾಜ ಗುಂಡಗುರ್ತಿ, ಲಿಂಗರಾಜ ತಾರಫೈಲ್, ದಶರಥ ಕಲುಗುರ್ತಿ, ಮಂಜುನಾಥ ನಾಲವಾರಕರ, ಪ್ರಲಾದ ಹಡಗಿಲಕರ್, ಉಮೇಶ ಮಾಲಗಿ, ಅರುಣ ಧಮ್ಮುಕರ್, ಸಿದ್ದರ್ಥಾ ಕೋರವಾರ, ಮನೋಹರ, ಪರುಶುರಾಮ ನಾಟಿಕರ ಸೇರಿದಂತೆ ಇತರರು ಇದ್ದರು

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News