ಕಲಬುರಗಿ | ಮಾ.29 ರಿಂದ ಡಾ.ಅಂಬೇಡ್ಕರ್ ಕುರಿತು ವಿಶೇಷ ಉಪನ್ಯಾಸ
Update: 2025-03-29 17:02 IST

ಡಾ.ಅಂಬೇಡ್ಕರ್
ಕಲಬುರಗಿ : ನಗರದ ಪೀಪಲ್ಸ್ ಎಜುಕೇಷನ್ ಸೊಸೈಟಿಯ ಡಾ.ಅಂಬೇಡ್ಕರ್ ಕಲಾ ಮತ್ತು ವಾಣಿಜ್ಯ ಪದವಿ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದ ಡಾ.ಅಂಬೇಡ್ಕರ್ ವಿಚಾರ ವೇದಿಕೆ ಮಾ.29 ರಿಂದ ಎ.12 ರವರೆಗೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134ನೇ ಜಯಂತಿಯ ನಿಮಿತ್ಯ ಸರಣಿ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಸಂಚಾಲಕರಾದ ಡಾ.ಗಾಂಧೀಜಿ ಮೊಳೆಕೆರೆ ತಿಳಿಸಿದ್ದಾರೆ.
ಈ ಸರಣಿ ಉಪನ್ಯಾಸ ಕಾರ್ಯಕ್ರಮದ ಮೊದಲ ಉಪನ್ಯಾಸ 29 ಏಪ್ರಿಲ್ 2025 ರಂದು ನಗರದ ರೇಷ್ಮಿ ಬಿಇಡಿ, ಎಂ.ಇಡಿ ಕಾಲೇಜಿನಲ್ಲಿ ಏರ್ಪಡಿಸಲಾಗಿದೆ. ಬೆಳಗ್ಗೆ 11 ಗಂಟೆಗೆ `ಜಾಗತಿಕ ವಿದ್ವತ್ ಲೋಕ ಮತ್ತು ಅಂಬೇಡ್ಕರ್ ಎಂಬ ವಿಷಯ ಕುರಿತು ಡಾ.ಅಂಬೇಡ್ಕರ್ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕರೂ, ಅಂಬೇಡ್ಕರ್ ಓದು ಯೂಟೂಬ್ ಸರಣಿಯ ಸಂಚಾಲಕರೂ ಆದ ಡಾ.ಅರುಣ್ ಜೊಳದಕೂಡ್ಲಿಗಿ ಅವರು ಉಪನ್ಯಾಸ ನೀಡಲಿದ್ದಾರೆ ಎಂದು ಹೇಳಿದ್ದಾರೆ.