ಕಲಬುರಗಿ | ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡಿ : ಶಿವಶರಣಪ್ಪ ಮೂಳೆಗಾಂವ್

ಕಲಬುರಗಿ : ಕನ್ನಡ ಉಪನ್ಯಾಸಕರು ಓದುವ ಕ್ರಮ ಇನ್ನಷ್ಟು ಉತ್ತಮಗೊಳಿಸಿಕೊಂಡು ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡುವುದರ ಮೂಲಕ ಉಪನ್ಯಾಸಕರು ಸಂಕ್ಷಿಪ್ತತೆ ಸ್ಪಷ್ಟತೆ ಹಾಗೂ ನಿಖರತೆ ಮೂಲಕ ಉಪನ್ಯಾಸವನ್ನು ನೀಡಬೇಕೆಂದು ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾದ ಶಿವಶರಣಪ್ಪ ಮೂಳೆಗಾಂವ್ ತಿಳಿಸಿದರು.
ನಗರದ ಗುರು ನಾಗಲಿಂಗೇಶ್ವರ ಪಿಯು ಕಾಲೇಜಿನಲ್ಲಿ 2025 ದ್ವಿತೀಯ ಪಿಯುಸಿ ಕನ್ನಡ ವಿಷಯದ ಮೌಲ್ಯಮಾಪನ ಕೇಂದ್ರದಲ್ಲಿ ವಯೋನಿವೃತ್ತ ಉಪನ್ಯಾಸಕರಿಗೆ ಹಾಗೂ ಪ್ರಾಚಾರ್ಯರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬೀದರ್ ಜಿಲ್ಲಾ ಪಿಯು ಇಲಾಖೆಯ ಉಪ ನಿರ್ದೇಶಕರಾದ ಚಂದ್ರಕಾಂತ್ ಶಾಬಾದ್ಕರ್ ಹಾಗೂ ಕಲಬುರಗಿ ಪಿಯು ಇಲಾಖೆಯ ಉಪ ನಿರ್ದೇಶಕರಾದ ಅಶೋಕ್ ಶಾಸ್ತ್ರಿ ಮಾತನಾಡಿದರು.
ವೇದಿಕೆಯ ಮೇಲೆ ಮೇಲ್ವಿಚಾರಕರಾದ ಅಮೃತ ಬೆಳಮಗಿ, ಶಿಬಿರಾಧಿಕಾರಿ ಗಳಾದ ಶಿವರಾಜ್ ಶೀಲವಂತ ಉಪಸ್ಥಿತರಿದ್ದರು.
ವಿಜಯಕುಮಾರ್ ರೋಣದ ಪ್ರಾರ್ಥನೆ ಮಾಡಿದರು. ಡಾ.ಮನ್ಮಥ ಡೋಳೆ ಸ್ವಾಗತಿಸಿದರು. ಶಿವಪ್ಪ ಹುಣಚಾಳ ಕಾರ್ಯಕ್ರಮ ನಿರೂಪಿಸಿದರು. ನಿವೃತ್ತ ಪ್ರಾಚಾರ್ಯರಾದ ಚಂದ್ರಕಾಂತ್ ಬಿರಾದಾರ್ ಹಾಗೂ ಉಪನ್ಯಾಸಕರಾದ ರೇವಣಸಿದ್ದಪ್ಪ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು. ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾಗಿ ನೇಮಿಸಿದ್ದಕ್ಕೆ ಬಿ ಎಚ್ ನಿರಗುಡಿ ಯವರನ್ನು ಸನ್ಮಾನಿಸಲಾಯಿತು. ಡಾ ಚಿ.ಸಿ.ನಿಂಗಣ್ಣ ಅವರಿಗೆ ಗುವಿ.ವಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದಕ್ಕೆ ಸನ್ಮಾನಿಸಲಾಯಿತು.
ದೇವಿದಾಸ್ ಪವರ್, ಡಾ.ಶಂಕರ್ ಬಾಳಿ, ಡಾ.ವಿಶ್ವನಾಥ ಹೊಸಮನಿ, ಡಾ.ಶಿವಾಜಿ ಮೇತ್ರೆ, ಮಾರುತಿ ರೆಡ್ಡಿ, ಡಾ.ಚಂದ್ರಪ್ಪ್, ಪ್ರೇಮನಾಥ್ ಪಂಚಾಳ, ರಾಜೇಂದ್ರ ಚವಾಣ್ ಮನೋಹರ್ ಪಿಡ್ಡಪ್ಪ, ಸಾಬಣ್ಣ ಮಹಾಂತೇಶ್ ಕಲಾಲ್, ಡಾ.ಅನ್ನಪೂರ್ಣ, ರೇವಮ್ಮ, ಶೈಲಜಾ, ಜಗದೇವಿ ಇತರರು ಉಪಸ್ಥಿತರಿದ್ದರು.