ಕಲಬುರಗಿ | ಏ.1ರಂದು ಡಾ.ಶಿವಕುಮಾರ ಸ್ವಾಮೀಜಿಗಳ 118ನೇ ಗುರುವಂದನಾ ಮಹೋತ್ಸವ : ಅರುಣಕುಮಾರ ಪಾಟೀಲ್

Update: 2025-03-29 17:10 IST
Photo of Press meet
  • whatsapp icon

ಕಲಬುರಗಿ : ಜಿಲ್ಲಾ ವೀರಶೈವ ಸಮಾಜ ಹಾಗೂ ಶ್ರೀ ಸಿದ್ಧಗಂಗಾ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದಿಂದ ತ್ರಿವಿಧ ದಾಸೋಹ ಮೂರ್ತಿ ಡಾ.ಶಿವಕುಮಾರ ಮಹಾಶಿವಯೋಗಿಗಳವರ 118ನೇ ಗುರುವಂದನಾ ಮಹೋತ್ಸವವನ್ನು ಏ.1ರಂದು ಬೆಳಗ್ಗೆ 11.15ಕ್ಕೆ ನಗರದ ಪತ್ರಿಕಾಭನದ ಸಾಂಸ್ಕೃತಿಕ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಅರುಣಕುಮಾರ ಎಸ್.ಪಾಟೀಲ್ ಕೊಡಲಹಂಗರಗಾ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕಾರ್ಯಕ್ರಮದ ಪ್ರಯುಕ್ತ ಶ್ರೀ ನಂದಗೋಕುಲ ವಿದ್ಯಾರ್ಥಿಗಳಿಗೆ 5,518 ರೂ. ಹಾಗೂ ಹಣ್ಣು ಹಂಪಲು ವಿತರಣೆ ಮಾಡಲಾಗುವುದು ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್ ಅವರಿಗೆ ಸಿದ್ದಗಂಗಾಶ್ರೀ ಪ್ರಶಸ್ತಿ ಮತ್ತು ಕೃಷಿ ಸಾಧಕರದ ಚನ್ನವೀರ ಕುಂಬಾರಮಠ ಅವರಿಗೆ ಡಾ.ಶಿವಕುಮಾರ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಬಿ.ಎಂ.ಪಾಟೀಲ್ ಕಲ್ಲೂರ್, ಬಸವರಾಜ ಹೊಕ್ರಾಣಿ ಅವರಿಗೆ ಸಂಘಸಿರಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಹೇಳಿದರು.

ರಾವೂರ ಸಿದ್ದಲಿಂಗೇಶ್ವರ ಸಂಸ್ಥಾನದ ಸಿದ್ದಲಿಂಗ ಮಹಾಸ್ವಾಮಿ ಮತ್ತು ಆಂದೋಲಾ ಕರುಣೇಶ್ವರ ಮಠದ ಸಿದ್ದಲಿಂಗ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸುವರು. ಸಿದ್ದಗಂಗಾ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘ ಮತ್ತು ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ ಎಸ್.ಪಾಟೀಲ್ ಕೊಡಲಹಂಗರಗಾ ಅಧ್ಯಕ್ಷತೆ ವಹಿಸುವರು. ಮಾಜಿ ಸಂಸದ ಬಸವರಾಜ ಪಾಟೀಲ್ ಸೇಡಂ ಉದ್ಘಾಟಿಸುವರು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ್‌ ಯಡ್ರಾಮಿ, ಸರ್ವಜ್ಞ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚನ್ನಾರೆಡ್ಡಿ ಪಾಟೀಲ್ ವಹಿಸುವರು ಎಂದರು.

ರಾಮಕೃಷ್ಣ ಬಡಶೇಷಿ, ಶ್ರೀಕಾಂತಾಚಾರ್ಯ ಮಣ್ಣೂರ, ಶಿವಲಿಂಗಪ್ಪ ಡಿ., ದೇವಯ್ಯ ಗುತ್ತೇದಾರ್, ಸಿದ್ದಲಿಂಗಯ್ಯ ಸ್ವಾಮಿ ಮಲ್ಕೂಡ, ಶರಣಬಸಪ್ಪ ಜಿಡಗಾ, ಸತೀಶ್ ಜೇವರ್ಗಿ, ಗುರುರಾಜ ಕುಲಕರ್ಣಿ, ವಿಜಯಭಾಸ್ಕರ್ ರೆಡ್ಡಿ, ಪ್ರಭುಲಿಂಗ ನೀಲೂರೆ, ಸುರೇಶ ಶಿಂಧೆ, ಶರಣು ಮಹಾಗಾಂವ, ಶಕೀಲ್ ಚೌಧರಿ ಅವರಿಗೆ ವಿಶೇಷವಾಗಿ ಸನ್ಮಾನಿಸಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪತ್ರಕರ್ತ ದೇವೇಂದ್ರಪ್ಪ ಅವಂಟಿ, ಚನ್ನಬಸಯ್ಯ ಗುರುವಿನ, ರುದ್ರಮುನಿ ಪುರಾಣಿಕ್, ಸುಭಾಷ್ ಬಿಜಾಪುರ, ರೇವಣಸಿದ್ದಪ್ಪ ಮಳಖೇಡ ಸೇರಿದಂತೆ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News