ಕಲಬುರಗಿ - ಬೆಂಗಳೂರು ನಡುವೆ ಬೇಸಿಗೆ ವಿಶೇಷ ರೈಲುಗಳ ಸಂಚಾರ

ಸಾಂದರ್ಭಿಕ ಚಿತ್ರ
ಕಲಬುರಗಿ : ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು ಹಾಗೂ ಬೇಡಿಕೆ ಮೇರೆಗೆ ಬೇಸಿಗೆ ರಜೆಯಲ್ಲಿ ಕೇಂದ್ರ ರೈಲ್ವೆಯ ಸೋಲಾಪುರ ವಿಭಾಗದ 2 ರ ವತಿಯಿಂದ ಕಲಬುರಗಿ ಹಾಗೂ ಬೆಂಗಳೂರು ನಡುವೆ 60 ಬೇಸಿಗೆ ವಿಶೇಷ ರೈಲುಗಳು ಸಂಚರಿಸಲಿವೆ ಎಂದು ಕೇಂದ್ರ ರೈಲ್ವೆಯ ಸೋಲಾಪುರ ವಿಭಾಗದ ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ರೈಲು ಸಂಖ್ಯೆ 06519 ವಿಶೇಷ ರೈಲು ಪ್ರತಿ ಶುಕ್ರವಾರ, ಶನಿವಾರ ಮತ್ತು ಭಾನುವಾರದಂದು ಎ.4ರಿಂದ ಜೂ.15.06.2025 ರವರೆಗೆ SMVT ಬೆಂಗಳೂರಿನಿಂದ ರಾತ್ರಿ 21:15 ಕ್ಕೆ ಹೊರಟು ಮರುದಿನ ಬೆಳಿಗ್ಗೆ 07:40 ಕ್ಕೆ ಕಲಬುರಗಿಗೆ ಆಗಮಿಸಲಿದೆ.
ರೈಲು ಸಂಖ್ಯೆ 06520 ವಿಶೇಷ ರೈಲು ಕಲಬುರಗಿಯಿಂದ ಪ್ರತಿ ಶನಿವಾರ, ಭಾನುವಾರ ಮತ್ತು ಸೋಮವಾರ ಎ.5ರಿಂದ ಜೂ.16ರವರೆಗೆ ಬೆಳಿಗ್ಗೆ 9:35 ಕ್ಕೆ ಹೊರಟು ಅದೇ ದಿನ ರಾತ್ರಿ 20:00 ಕ್ಕೆ SMVT ಬೆಂಗಳೂರಿಗೆ ತಲುಪಲಿದೆ.
ಈ ವಿಶೇಷ ರೈಲುಗಳು ಶಹಾಬಾದ, ಯಾದಗಿರಿ, ಕೃಷ್ಣಾ, ರಾಯಚೂರು, ಮಂತ್ರಾಲಯ ರಸ್ತೆ, ಅದೋನಿ, ಗುಂತಕಲ್, ಅನಂತಪುರ, ಧರ್ಮಾವರಂ ಮತ್ತು ಯಲಹಂಕ ಮೂಲಕ ಸಂಚರಿಸಲಿವೆ.
ಹೆಚ್ಚಿನ ಮಾಹಿತಿಯನ್ನು ವೆಬ್‌ಸೈಟ್ www.irctc.co.in ದಿಂದ ಅಥವಾ ಈ ವಿಶೇಷ ರೈಲುಗಳ ವಿವರವಾದ ಸಮಯ ಮತ್ತು ನಿಲುಗಡೆ ಮತ್ತೀತರ ಹೆಚ್ಚಿನ ಮಾಹಿತಿಯನ್ನು www.enquiry.indianrail.gov.in ಗೆ ಭೇಟಿ ನೀಡಿ ಅಥವಾ NTES ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಪಡೆಯಬಹುದಾಗಿದೆ.