ಕಲಬುರಗಿ | ಯಶಸ್ವಿನಿ ಆರೋಗ್ಯ ಯೋಜನೆ: ಎಲ್ಲಾ ಸಹಕಾರಿಗಳು ನೋಂದಾಯಿಸಲು, ನವೀಕರಿಸಲು ಮಾ.31 ಕೊನೆಯ ದಿನ

Update: 2025-03-21 22:53 IST
ಕಲಬುರಗಿ | ಯಶಸ್ವಿನಿ ಆರೋಗ್ಯ ಯೋಜನೆ: ಎಲ್ಲಾ ಸಹಕಾರಿಗಳು ನೋಂದಾಯಿಸಲು, ನವೀಕರಿಸಲು ಮಾ.31 ಕೊನೆಯ ದಿನ

ಸಾಂದರ್ಭಿಕ ಚಿತ್ರ

  • whatsapp icon

ಕಲಬುರಗಿ : ಪ್ರಸಕ್ತ 2024-25ನೇ ಸಾಲಿಗೆ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯಡಿ ಕಲಬುರಗಿ ಜಿಲ್ಲೆಯ ಎಲ್ಲಾ ಸಹಕಾರಿಗಳು ನೋಂದಾಯಿಸಲು ಹಾಗೂ ನವೀಕರಿಸುವ ಅವಧಿಯನ್ನು 2025ರ ಮಾ.31 ರವರೆಗೆ ನಿಗದಿಪಡಿಸಲಾಗಿದ್ದು, ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ಎಲ್ಲಾ ಸಹಕಾರಿಗಳು ಈ ಯೋಜನೆಯ ಸದುಪಯೋಗ ಪಡೆಯಬೇಕೆಂದು ಕಲಬುರಗಿ ಸಹಕಾರ ಸಂಘಗಳ ಉಪನಿಬಂಧಕರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಹಕಾರ ಸಂಘಗಳ ಉಪನಿಬಂಧಕರು/ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಲಬುರಗಿ ಕಚೇರಿಯನ್ನು ಹಾಗೂ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಸೇಡಂ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News