ಕಲಬುರಗಿ: ಜ.12 ರಂದು 6ನೇ ಸೀರತುನ್ನಬಿ ಪುರಸ್ಕಾರ
ಕಲಬುರಗಿ: ಕರ್ನಾಟಕ ಸೀರತುನ್ನಬಿ ಸ್ಟಡಿ ಮತ್ತು ರಿಸರ್ಚ್ ಸೆಂಟರ್, ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ಮರ್ಖಜಿ ಸೀರತ್ ಸಮಿತಿಯಿಂದ ನಗರದ ಖಮರ್ ಕಾಲೋನಿಯ ಶಾಲಿಮಾರ್ ಫಂಕ್ಷನ್ ಹಾಲ್ ನಲ್ಲಿ ಜ.12ರಂದು ಬೆಳಗ್ಗೆ 10.30ಕ್ಕೆ 6ನೇ ಸೀರತುನ್ನಬಿ ಪುರಸ್ಕಾರ ವಿತರಣೆ ನಡೆಯಲಿದೆ. ಎಂದು ಸಮಿತಿಯ ಮುಖಂಡ ಮಹಮ್ಮದ್ ಅಸಗರ್ ಚುಲಬುಲ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಿಗೆ ಸನ್ಮಾನ, ಖ್ವಾಜಾ ಬಂದೇ ನವಾಜ್ ದರ್ಗಾದ ನೂತನ ಪೀಠಾಧಿಪತಿಗಳಿಗೆ ವಿಶೇಷ ಸನ್ಮಾನ ಮತ್ತು 100 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ 2ಲಕ್ಷ ರೂ. ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಳೆದ 6 ವರ್ಷಗಳಿಂದ ಪ್ರತಿವರ್ಷ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬರುತ್ತಿದ್ದು, ಈ ಸಮಾರಂಭದಲ್ಲಿ ಖುರ್‌ಆನ್‌ನಲ್ಲಿ ಪ್ರವಾದಿ ಮಹಮ್ಮದ್ ಪೈಗಂಬರ್ ಕುರಿತು ಆಯೋಜಿಸಿದ್ದ ಕ್ವಿಝ್, ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆ, ನಾರ್ಥ್ ಖಾವನಿ, ಹದೀಸ್, ಸೀರತ್ ಕ್ವಿಝ್ ಸೇರಿದಂತೆ ಹಲವು ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ನೀಡಲಾಗುವುದು. ಈಚೆಗೆ ಕೆಬಿಎನ್ ದರ್ಗಾದ ನೂತನ ಪೀಠಾಧಿಪತಿ, ವಿವಿಯ ನೂತನ ಕುಲಾಧಿಪತಿಯಾಗಿ ಅಧಿಕಾರ ಸ್ವೀಕರಿಸಿದ ಸಜ್ಜಾದೆ ಅವರನ್ನು ಸನ್ಮಾನಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಸಮುದಾಯದ ಮುಖಂಡರು, ರಾಜಕೀಯ ನಾಯಕರು ಸೇರಿದಂತೆ ಹಿರಿಯ ಪತ್ರಕರ್ತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಜೀಜುಲ್ಲಾ ಸರಮಸ್ತ್, ಮುಷ್ತಾಕ್ ಅಹ್ಮದ್, ಮೌಲಾನಾ ಗೌಸುದ್ದೀನ್, ಮೌಲಾನಾ ಶಫೀಕ್ ಖಾಸ್ಮಿ, ಮೌಲಾನಾ ಶಾಕಿರ್ ನೂರಿ, ಮಜಹರ್ ಖಾದ್ರಿ, ಖಾಸಿಂ ಜುನೈದಿ, ಶೇಖ್ ಶಹಾ ವಲಿ ಸೇರಿದಂತೆ ಇತರರು ಹಾಜರಿದ್ದರು.