ಕಲಬುರಗಿ | ಜಾಗೃತ ಗ್ರಾಹಕರು ದೇಶದ ದೊಡ್ಡ ಆರ್ಥಿಕ ಶಕ್ತಿ : ನ್ಯಾ. ವೈಜನಾಥ ಎಸ್.ಝಳಕಿ
ಕಲಬುರಗಿ : ಆಳಂದ ತಾಲ್ಲೂಕಿನ ಸರಸಂಬಾ ಗ್ರಾಮದಲ್ಲಿ ಸಮತಾ ಲೋಕ ಶಿಕ್ಷಣ ಟ್ರಸ್ಟ್ ಕಲಬುರಗಿ, ಕೃಷಿ ಮಾಹವಿದ್ಯಾಲಯ ಕಲಬುರಗಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ʼಸಾಸಿರ ನಾಡಿನ ಕೃಷಿ ಜಾತ್ರೆ- 2024ʼರಲ್ಲಿ ಮುಖ್ಯಮಂತ್ರಿಗಳ ಸಲಹೆಗಾರರು ಹಾಗೂ ಆಳಂದ ಶಾಸಕರಾದ ಬಿ.ಆರ್.ಪಾಟೀಲ್ ಹಾಗೂ ಕೆ.ಎಮ್.ಎಫ್ ನ ಅಧ್ಯಕ್ಷರಾದ ಆರ್.ಕೆ.ಪಾಟೀಲ್ ಇವರ ಮಾರ್ಗ ದರ್ಶನ ಹಾಗೂ ಉಪಸ್ಥಿತಿಯಲ್ಲಿ ಮಹಿಳಾ ಗ್ರಾಹಕರಿಂದ ಸಸಿಗೆ ನೀರು ಹಾಕುವ ಮೂಲಕ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ನ್ಯಾಯವಾದಿ ವೈಜನಾಥ ಎಸ್.ಝಳಕಿ, ಪ್ರಧಾನ ಕಾರ್ಯದರ್ಶಿ ಮಾಹತ್ಮಗಾಂಧಿಜಿ ಗ್ರಾಹಕರ ಹಿತರಕ್ಷಣೆ ವೇದಿಕೆ ಅವರು ರೈತರಿಗೆ ಗ್ರಾಹಕ ಹಿತರಕ್ಷಣಾ ಕಾಯ್ದೆಯ ಉಪಯೋಗಗಳ ಕುರಿತು ವಿಶೇಷ ಉಪನ್ಯಾಸ ನೀಡಿ ಗ್ರಾಹಕರೊಂದಿಗೆ ಸಂವಾದ ನಡೆಸುತ್ತಾ, ʼಜಾಗ್ರತ ಗ್ರಾಹಕರು ದೇಶದ ಆರ್ಥಿಕ ಶಕ್ತಿಯ ಭದ್ರ ಬುನಾದಿʼ ಎಂದು ಹೇಳಿದರು.
ಗ್ರಾಹಕರು ಜಾಗೃತಿಯಿಂದ ವ್ಯವಹರಿಸಿಬೇಕು, ಕಡ್ಡಾಯವಾಗಿ ಪ್ರತಿಯೊಂದು ಖರಿದಿಗೆ- ವ್ಯಾಪರಿಗಳಿಂದ ರಶೀದಿ ಪಡೆಯಬೇಕು ಇದರಿಂದ ನೊಂದ ಗ್ರಾಹಕರಿಗೆ ಗ್ರಾಹಕ ಕಾಯ್ದೆ ಅಡಿ ನ್ಯಾಯ ಪಡೆಯಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕರಾದ ಸಮದ್ ಪಟೇಲ್, ಕೃಷಿ ವಿಜ್ಞಾನ ಕೇಂದ್ರ ಕಲಬುರಗಿಯ ಹಿರಿಯ ವಿಜ್ಞಾನಿ ರಾಜು ತೆಗ್ಗಳ್ಳಿ, ಕೃಷಿ ವಿಜ್ಞಾನಿಗಳಾದ ಡಾ.ಮಲ್ಲಪ್ಪ, ಡಾ.ಚಂದ್ರಕಾಂತ ಕೃಷಿ ವಿಜ್ಞಾನ ಕೇಂದ್ರ ರದ್ದೆವಾಡಗಿ, ರಾಜಶೇಖರ ಬಸನಾಯಕ ಕೃಷಿ ಕಾಲೇಜ ಕಲಬುರಗಿ, ಕೆ.ಎಮ್.ಎಫ್ ಕಲಬುರಗಿಯ ನಿವೃತ ಎಮ್.ಡಿ ಡಾ.ಕಮಕೇರಿ ಹಾಗೂ ಆಳಂದನ ಸಾಹಯಕ ಕೃಷಿ ನಿರ್ದೇಶಕರಾದ ಶರಣಗೌಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.