ಕಲಬುರಗಿ | ಬಂದ್ ಗೆ ಬೆಂಬಲಿಸಿ ಅಂಬೇಡ್ಕರ್‌ ಸೇನೆಯಿಂದ ಪ್ರತಿಭಟನೆ

Update: 2024-12-24 11:42 GMT

ಕಲಬುರಗಿ : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆ ಖಂಡಿಸಿ, ಅಂಬೇಡ್ಕರ ಸೇನೆಯ ಜಿಲ್ಲಾಧ್ಯಕ್ಷರಾದ ಶ್ರೀಧರ (ಗೌತಮ) ಪುಟಗೆ ನೇತೃತ್ವದಲ್ಲಿ ನಗರದಲ್ಲಿ ಮಂಗಳವಾರ ಬಂದ್ ಗೆ ಬೆಂಬಲಿಸಿ ಪ್ರತಿಭಟಿಸಿದರು.

ನಂತರ ಅಂಬೇಡ್ಕರ ಸೇನೆಯ ಕಾರ್ಯಕರ್ತರು ಮಾತನಾಡಿ, ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರು ಬಾಬಾ ಸಾಹೇಬರು ಬರೆದಿರುವ ಸಂವಿಧಾನದಡಿಯಲ್ಲಿ ಕೇಂದ್ರ ಗೃಹ ಸಚಿವರಾಗಿದ್ದು, ಅಂಬೇಡ್ಕರವರ ಬಗ್ಗೆ ಅವಮಾನ ಮಾಡಿದ್ದನ್ನು ನಮ್ಮ ಅಂಬೇಡ್ಕರ ಸೇನೆ ಖಂಡಿಸುತ್ತದೆ ಎಂದರು.

ಸಂವಿಧಾನದಡಿಯಲ್ಲಿ ಒಂದು ದೇಶದ ಉನ್ನತ ಹುದ್ದೆ ದೊರಕಿದ್ದು, ಯಾವ ದೇವರ ದಯೆಯಿಂದಲ್ಲ, ದೇವರ ನಾಮಸ್ಮರಣೆ ಮಾಡಿದರೆ 7 ಜನ್ಮದಲ್ಲಿ ಸ್ವರ್ಗ ಸಿಗುತ್ತದೆ ಎನ್ನುವ ಗೃಹ ಸಚಿವರು, ಅಂಬೇಡ್ಕರವರ ನಾಮಸ್ಮರಣೆಯಿಂದಲೇ ಇದೇ ಜನ್ಮದಲ್ಲಿ ಸ್ವರ್ಗ ಸಿಕ್ಕಿರುವುದನ್ನು ಅರ್ಥ ಮಾಡಿಕೊಳ್ಳಬೇಕು. ನೀವು ನಿಮ್ಮ ಪ್ರಧಾನಿ ಚಹಾ ಮತ್ತು ವ್ಯಾಪಾರ ಮಾಡುವವರಿಗೆ ಉನ್ನತ ಹುದ್ದೆ ಕೊಟ್ಟಿರುವುದು ಸಂವಿಧಾನ ಅನ್ನುವುದು ತಿಳಿದಿರುವ ಸಂಗತಿ ಎಂದರು.

ಕೇಂದ್ರ ಗೃಹಮಂತ್ರಿ ಅಮಿತ್ ಶಾ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು ಇಲ್ಲವಾದಲ್ಲಿ ದೇಶಾದ್ಯಂತ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಅವರು ಮನವಿ ಪತ್ರದಲ್ಲಿ ಎಚ್ಚರಿಕೆ ನೀಡಿದರು.

Full View

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News