ಕಲಬುರಗಿ: ಪಿಯು ಪರೀಕ್ಷೆಯಲ್ಲಿ ಗುತ್ತೇದಾರ ಪದವಿ ಪೂರ್ವ ಕಾಲೇಜಿಗೆ ಉತ್ತಮ ಫಲಿತಾಂಶ

Update: 2025-04-08 21:01 IST
ಕಲಬುರಗಿ: ಪಿಯು ಪರೀಕ್ಷೆಯಲ್ಲಿ ಗುತ್ತೇದಾರ ಪದವಿ ಪೂರ್ವ ಕಾಲೇಜಿಗೆ ಉತ್ತಮ ಫಲಿತಾಂಶ

ಸ್ನೇಹಾ ಮಲ್ಲಿನಾಥ / ಲತಾ ಮಲ್ಲಿಕಾರ್ಜುನ

  • whatsapp icon

ಕಲಬುರಗಿ: ಆಳoದ ಪಟ್ಟಣದ ಪ್ರತಿಷ್ಠಿತ ಜೀವನಜ್ಯೋತಿ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಮಾತೋಶ್ರೀ ಅಂಬವ್ವಾ ರುಕ್ಮಯ್ಯ ಗುತ್ತೇದಾರ ಸ್ಮಾರಕ ಸ್ವತಂತ್ರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ಬಂದಿದೆ.

ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಲತಾ ಮಲ್ಲಿಕಾರ್ಜುನ ಶೇ. 92%, ಸ್ನೇಹಾ ಮಲ್ಲಿನಾಥ ಶೇ. 91.16%, ಯುವರಾಜ ಅಂಬಾರಾಯ ಶೇ. 90.83%, ಶಿವಶರಣಪ್ಪ ಚಿದಾನಂದ ಶೇ. 90, ಕಲಾ ವಿಭಾಗದ ಸುಚಿತ್ರಾ ದೋಂಢೀಬಾ ಶೇ. 90%, ಸುನೀಲ ಹೀರು ಶೇ. 90, ವಾಣಿಜ್ಯ ವಿಭಾಗದ ಸಾವನ ಲಿಂಬಾಜಿ ಶೇ. 85%, ಚಂದ್ರಶೇಖರ ಶೇ. 74% ಅಂಕಗಳಿಸಿ ಉತ್ತಮ ಸಾಧನೆ ಮಾಡಿದ್ದಾರೆ. 

ಕಾಲೇಜು ಸತತ 26 ವರ್ಷಗಳಿಂದ ಉತ್ತಮ ಫಲಿತಾಂಶ ನೀಡುತ್ತಿದೆ. ವಿಜ್ಞಾನ ವಿಭಾಗದಲ್ಲಿ ಪಠ್ಯಕ್ರಮದ ಜೊತೆಗೆ ನೀಟ್, ಸಿಇಟಿ, ಜೆಇಇ ಸೇರಿದಂತೆ ಮುಂತಾದ ಪರೀಕ್ಷೆಗಳಿಗೆ ಆರಂಭದಿಂದಲೇ ತರಬೇತಿ ನೀಡಲಾಗುತ್ತಿದೆ.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರೂ ಹಾಗೂ ಮಾಜಿ ಶಾಸಕರಾದ ಸುಭಾಷ್ ಆರ್ ಗುತ್ತೇದಾರ, ಸಂಸ್ಥೆಯ ಕಾರ್ಯದರ್ಶಿಗಳೂ ಹಾಗೂ ಜಿ.ಪಂ ಮಾಜಿ ಉಪಾಧ್ಯಕ್ಷರಾದ ಹರ್ಷಾನಂದ ಗುತ್ತೇದಾರ, ಪ್ರಾಚಾರ್ಯ ಡಾ. ಅಪ್ಪಾಸಾಬ ಬಿರಾದಾರ ಸೇರಿದಂತೆ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News