ಕಲಬುರಗಿ: ಪಿಯು ಪರೀಕ್ಷೆಯಲ್ಲಿ ಎನ್ ಪಿ ಎಸ್ ಪದವಿ ಪೂರ್ವ ಕಾಲೇಜಿಗೆ ಶೇ.98.12 ಫಲಿತಾಂಶ

ಕಲಬುರಗಿ: 2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಇಲ್ಲಿನ ನ್ಯಾಷನಲ್ ಪಬ್ಲಿಕ್ ವಿಜ್ಞಾನ ಪದವಿಪೂರ್ವ ಕಾಲೇಜಿನ ಶೇ.98.12 ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ಒಟ್ಟು 319 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ 76 ವಿದ್ಯಾರ್ಥಿಗಳು (ಡಿಸ್ಟ್ರಿಂಕ್ಷನ್,) ಪ್ರಥಮ ಶ್ರೇಣಿಯಲ್ಲಿ, 217 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 20 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಒಟ್ಟಾರೆ ಕಾಲೇಜಿನ ಫಲಿತಾಂಶ ಒಟ್ಟು ಸರಾಸರಿ ಪ್ರತಿಶತ 98.12 ಆಗಿದೆ ಎಂದು ಕಾಲೇಜು ಪ್ರಕಟಣೆಯಲ್ಲಿ ತಿಳಿಸಿದೆ.
ವಿದ್ಯಾರ್ಥಿಗಳಾದ ಆದಿತ್ಯ ಪ್ರಭುಲಿಂಗಯ್ಯ ಹಿರೇಮಠ 577/600 ಪ್ರತಿಶತ 96.16, ಶೇಕ್ ಜೋಯಾ 576/600 ಪ್ರತಿಶತ 96, ಸಪ್ನಾ ಬಿರಾದರ 572/600 ಪ್ರತಿಶತ 95.3 ಅಂಕಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಹಾಗೂ ಇಂತಹ ಸಾಧನೆಗೆ ಕಾರಣರಾದ ಕಾಲೇಜಿನ ಬೋಧಕ ಸಿಬ್ಬಂದಿಗಳಿಗೆ ಕಾಲೇಜಿನ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರೂ ಆಗಿರುವ ಶಶೀಲ.ಜಿ.ನಮೋಶಿಯವರು ಹರ್ಷ ವ್ಯಕ್ತಪಡಿಸಿದ್ದಾರೆ. ಕಾರ್ಯದರ್ಶಿಗಳಾದ ಸುರೇಶ ಬುಲ್ ಬುಲೆ ಅವರು ವಿದ್ಯಾರ್ಥಿಗಳ ಈ ಸಾಧನೆಗೆ ಅಭಿನಂದಿಸಿದ್ದಾರೆ. ಅಲ್ಲದೆ, ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯರು,ಬೋಧಕ, ಬೋಧಕೇತರ ಸಿಬ್ಬಂದಿಯವರು ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.