ಕಲಬುರಗಿ | ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿ ವಕೀಲರಿಂದ ಪ್ರತಿಭಟನೆ
ಕಲಬುರಗಿ : ಕೇಂದ್ರ ಗೃಹ ಸಚಿವರು ಹಾಗೂ ಬಿಜೆಪಿಯ ಮುಖಂಡರಾದ ಅಮಿತ್ ಶಾ ಅವರು ಒಬ್ಬ ಜವಾಬ್ದಾರಿತವಾದ ಸ್ಥಾನದಲ್ಲಿದ್ದುಕೊಂಡು, ಸಂವಿಧಾನದ ಅಡಿಯಲ್ಲಿ ಅಧಿಕಾರವನ್ನು ಹಿಡಿದು, ಸಂವಿಧಾನ ಶಿಲ್ಪಿಗೆ ಅವಮಾನಕರ ರೀತಿ ಹೇಳಿಕೆ ನೀಡಿರುವುದು ಖಂಡನೀಯ ಎಂದು ಜೇವರ್ಗಿ ತಾಲ್ಲೂಕು ವಕೀಲರ ಸಂಘದ ವತಿಯಿಂದ ಪ್ರತಿಭಟನೆ ನಡೆಸಿ ಜೇವರ್ಗಿ ತಹಶೀಲ್ದಾರ್ ರ ಮೂಲಕ ಮನವಿ ಪತ್ರವನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಿದರು.
ಜೇವರ್ಗಿ ನ್ಯಾಯಾಲಯದಿಂದ ತಹಶೀಲ್ದಾರ್ ಕಚೇರಿಗೆ ಆಗಮಿಸಿದ ನ್ಯಾಯವಾದಿಗಳು ಕೇಂದ್ರ ಗೃಹಸಚಿವ ಅಮಿತ್ ಶಾ ವಿರುದ್ಧ ಘೋಷಣೆಗಳನ್ನು ಕೂಗಿದರು.
ರಾಜಶೇಖರ್ ಶಿಲ್ಪಿ ನೋಟರಿ ವಕೀಲ ಮಾತನಾಡಿ, ಜಾತಿಧರ್ಮ, ಸಮಾಜದ ವಿಷಯದಲ್ಲಿ ಬಿಜೆಪಿ ಪಕ್ಷವು ಅಸಂವಿಧಾನಿಕ ಬೇಜವಾಬ್ದಾರಿಯುತವಾದ ಹೇಳಿಕೆಯನ್ನು ನೀಡಿ ತನ್ನ ಆರ್ ಎಸ್ ಎಸ್ ಸಂಸ್ಕೃತಿಯನ್ನು ಬಿಂಬಿಸುತ್ತಿದೆ ಎಂದು ಹೇಳಿದರು.
ನ್ಯಾ.ಸಿದ್ದು ಯಂಕಂಚಿ ಮಾತನಾಡಿ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರು ರಚಿಸಿದ ಸಂವಿಧಾನದ ಅಡಿಯಲ್ಲಿ ರಾಜಕೀಯ ಅಧಿಕಾರವನ್ನು ಹಿಡಿದು ತಮ್ಮ ಸ್ಥಾನಮಾನದ ಅರಿವಿಲ್ಲದೆ ಹಗುರವಾದ ಹೇಳಿಕೆ ಹೇಳುತ್ತಿರುವುದು ಖಂಡನೀಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನೊಟರಿ ವಕೀಲರಾದ ಬೆಣ್ಣಪ್ಪ ಕೊಂಬಿನ್, ತಾಲ್ಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಂ.ಐ.ಸೂಗೂರ, ಪ್ರಧಾನ ಕಾರ್ಯದರ್ಶಿ ಬಿ.ಎನ್.ಕೊಂಬಿನ್, ಖಜಾಂಚಿ ರಾಜು ಮುದ್ದಡಗಿ, ನ್ಯಾ.ಭಾಷಾ ಪಟೇಲ್ ಯಾಳವಾರ, ಅಪ್ಪಸಾಹೇಬ್ ಕೊಳಕೂರ, ಸಂತೋಷ ಆಲೂರು, ಸಿದ್ದು ಕಲ್ಲೂರ್, ಪಿ. ಎಸ್ ಪಾಟೀಲ, ಪರಶುರಾಮ್ ಮುದುಬಾಳ್, ಸಾಯಬಣ್ಣ ಮಲ್ಲಾಬಾದ್, ಭಾಗೇಶ ಹೊತಿಮನಮಡು, ಶರಣು ನೆಲೋಗಿ, ಮಲ್ಲಿಕಾರ್ಜುನ್ ಪೂಜಾರಿ, ಎಂ.ಸಿ.ಸೊನ್ನದ, ತುಳಜಾ ರಾಮ್ ರಾಠೋಡ್, ರಾಜು ಸರ್ಕಾರ್, ಗಿರಿಮಲ್ಲಪ್ಪ ಯಲಗೋಡ, ಸೋಮಶೇಖರ್ ಸರ್ದಾರ್ ಸೇರಿದಂತೆ ಅನೇಕರಿದ್ದರು.