ಕಲಬುರಗಿ | 300 ಕುಟಂಬಗಳಿಗೆ ರಮಝಾನ್ ಆಹಾರ ಕಿಟ್ ವಿತರಣೆ

Update: 2025-03-16 19:56 IST
ಕಲಬುರಗಿ | 300 ಕುಟಂಬಗಳಿಗೆ ರಮಝಾನ್ ಆಹಾರ ಕಿಟ್ ವಿತರಣೆ
  • whatsapp icon

ಕಲಬುರಗಿ : ಅಶಕ್ತರಿಗೆ, ಅನಾಥರಿಗೆ, ಬಡವರಿಗೆ ಸಹಾಯ ಮಾಡಿದವರಿಗೆ ಅಲ್ಲಾಹನ ಪ್ರೀತಿ ಪ್ರಾಪ್ತವಾಗುವುದರಲ್ಲಿ ಯಾವುದೇ ಸಂದೇಹ ಇಲ್ಲ, ರಮಝಾನ್ ತಿಂಗಳಲ್ಲಿ ಬಡವರ ಸಹಾಯಕ್ಕೆ ದಾನಿಗಳು ಫಿತ್ರು ಜಾಕತ್ ನೀಡಲು ಮುಂದಾಗಬೇಕು ಎಂದು ಸಫಾ ಬೈತುಲ್ ಮಾಲ್ ಸಂಚಾಲಕ ಮುಹಮ್ಮದ್‌ ಇಸ್ಮಾಯಿ ಪಟೇಲ ಪೋಲಕಪಳ್ಳಿ ಕರೆ ನೀಡಿದರು.

ಚಿಂಚೋಳಿ ಪಟ್ಟಣದ ನೂತನವಾಗಿ ನಿರ್ಮಾಣಗೊಂಡ ಫಕ್ಷನ್‌ ಹಾಲ್‌ನಲ್ಲಿ ರಹೆಬರ್ ಫೌಡೆಷನ್ ಮತ್ತು ಚಿಂಚೋಳಿ ಸಫಾಬೈತುಲ್ ಮಾಲ್ ಸಂಯುಕ್ತ ಆಶ್ರಯದಲ್ಲಿ 300 ಜನ ಬಡ ಕುಟಂಬಗಳಿಗೆ ಉಚಿತ ಆಹಾರ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ರಮಝಾನ್ ಹಬ್ಬವು ದಾನ ಧರ್ಮದ ಸಂಕೇತವಾಗಿದ್ದು, ಅದನ್ನು ಯಾವುದೇ ಜಾತಿ, ಧರ್ಮಕ್ಕೆ ಹೊಲಿಸದೇ ಮಾನವ ಧರ್ಮ ಒಂದೇ ಎಂಬ ಉದ್ದೇಶದಿಂದ ಎಲ್ಲ ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ಮಾಡುವುದೇ ನಮ್ಮ ಸಂಸ್ಥೆಯ ಧ್ಯೇಯವಾಗಿದೆ, ದಾನಿಗಳು ಮತ್ತು ಇತರರಿಂದ ಸಹಾಯ ಪಡೆದುಕೊಂಡು ಅನಾರೋಗ್ಯ ಪೀಡಿತರಿಗೆ ನೆರವು, ಆಹಾರದ ಕಿಟ್ ವಿತರಣೆ, ಬಡ ಹೆಣ್ಣು ಮಕ್ಕಳ ಮದುವೆಗೆ ನೆರವು ಸೇರಿದಂತೆ ಹಲವು ರೀತಿಯ ಸಮಾಜ ಸೇವೆಯನ್ನು ಮಾಡುತ್ತಾ ಬಂದಿದ್ದೇವೆ. ಈ ಬಾರಿ 500 ಕುಟುಂಬಗಳಿಗೆ ಕಿಟ್ ವಿತರಣೆ ಮಾಡುವ ಗುರಿ ಹೊಂದಲಾಗಿದೆ. ಚಿಂಚೋಳಿ ತಾಲೂಕಿನ ಬಡಕುಟಂಬಗಳಿಗೆ ಕಿಟ್ ವಿತರಣೆ ಮಾಡಲಾಗಿದೆ. ಉಳಿದ 200 ಕೀಟಗಳು ಹಂತಹಂತವಾಗಿ ನೀಡಲಾಗುತ್ತದೆ, ಇದಕ್ಕೆ ದಾನಿಗಳು ಮುಂದಾಗಿ ಬಡ ಜನರ ನರೆವು ಆಗಬೇಕು ಎಂದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಅಬ್ದುಲ್ ಬಾಸೀದ್, ಪುರಸಭೆ ಉಪಾಧ್ಯಕ್ಷ ಶಬ್ಬೀರ ಅಹ್ಮದ , ಟಿಹೆಚ್ಓ ಮಹ್ಮದ ಗಫಾರ್, ಕೆಎಮ್ ಬಾರಿ, ಮತೀನ ಸೌಧಘರ್, ಜೀಯಾ ಉರ್ ರಹೆಮಾನ, ಹಮೀದ್ ಹಫಿಜ್, ಕಮಲ ಖಾನ, ಡಾ ಜಮಾಲ, ಅಹ್ಮದ ಭಾಗ್ವಾನ, ಮೌಲಾನಾ ಮುಕ್ತಾರ್,ಜಮೀರ್ ಸೇರಿದಂತೆ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News