ಕಲಬುರಗಿ | ಮಂಗಳಮುಖಿಯ ತಲೆ ಬೋಳಿಸಿ, ಬೆತ್ತಲೆಗೊಳಿಸಿ ಹಲ್ಲೆ : ವೀಡಿಯೊ ವೈರಲ್
Update: 2025-03-16 13:42 IST

ಕಲಬುರಗಿ : ಮಂಗಳಮುಖಿಯನ್ನು ಬೆತ್ತಲೆಗೊಳಿಸಿ ಮಂಗಳಮುಖಿಯರೇ ಹಲ್ಲೆಗೈದು ಕೇಶ ಮುಂಡನೆ ಮಾಡಿರುವ ಘಟನೆ ನಗರದ ಬಸ್ ನಿಲ್ದಾಣದಲ್ಲಿ ನಡೆದಿದೆ. ಈ ಕುರಿತ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಂಕಿತಾ ಹಲ್ಲೆಗೆ ಒಳಗಾದ ಮಂಗಳಮುಖಿ ಎಂದು ತಿಳಿದು ಬಂದಿದೆ.
ಭಿಕ್ಷಾಟನೆ ಮಾಡಿದ ಹಣದಲ್ಲಿ ಪಾಲು ನೀಡದ್ದಕ್ಕೆ ಹಲ್ಲೆ ನಡೆದಿದೆ ಎನ್ನಲಾಗಿದ್ದು, ಹಲ್ಲೆಗೆ ಒಳಗಾದ ಮಂಗಳಮುಖಿಯನ್ನು ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಶೀಲಾ, ಮಾಲಾ, ಭವಾನಿ ಸೇರಿ 6 ಜನ ಮಂಗಳಮುಖಿಯರು ಅಂಕಿತಾ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ.