ಕಲಬುರಗಿ | ತಲೆ ಮೇಲೆ ಕಲ್ಲು ಎತ್ತಿಹಾಕಿ ಯುವಕನ ಬರ್ಬರ ಹತ್ಯೆ
Update: 2025-03-16 12:53 IST

ರೇವಣಸಿದ್ದಪ್ಪ ಪಾಳೆಕಾರ್
ಕಲಬುರಗಿ : ತಲೆ ಮೇಲೆ ಕಲ್ಲು ಎತ್ತಿ ಹಾಕಿ ಯುವಕನೊರ್ವನನ್ನು ಹತ್ಯೆಗೈದ ಘಟನೆ ಕಲಬುರಗಿ ನಗರದ ರಾಜಾಪುರ ಬಡಾವಣೆಯ ಹೊಟೇಲ್ ಮುಂಭಾಗದಲ್ಲಿ ತಡರಾತ್ರಿ ನಡೆದಿದೆ.
ರೇವಣಸಿದ್ದಪ್ಪ ಪಾಳೆಕಾರ್ (33) ಕೊಲೆಯಾದ ಯುವಕನಾಗಿದ್ದು, ಸ್ನೇಹಿತರ ಜೊತೆಗೆ ಸಿಗರೇಟ್ ಸೇದಲು ಬಂದಾಗ ಗಲಾಟೆಯಾಗಿ ಕೊಲೆ ನಡೆದಿದೆ ಎನ್ನಲಾಗಿದೆ.
ಸ್ನೇಹಿತರೆ ಕೊಲೆ ಮಾಡಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಈ ಕುರಿತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.