ಕಲಬುರಗಿ | ಶಿಕ್ಷಣವು ಬದುಕಿನ ಮೇಲ್ಮೈಯನ್ನು ಉತ್ತಮಗೊಳಿಸಲು ಪ್ರೇರಣೆ ನೀಡುತ್ತದೆ : ಮಲ್ಲಿಕಾರ್ಜುನ ಬುಕ್ಕೆ
ಕಲಬುರಗಿ : ಶಿಕ್ಷಣವು ಬದುಕಿನ ಮೇಲ್ಮೈಯನ್ನು ಉತ್ತಮಗೊಳಿಸಲು ಪ್ರೇರಣೆ ನೀಡುತ್ತದೆ ಎಂದು ಪಟ್ಟಣದ ಎಂಪಿಎoಜಿ ಪಿಯು ಕಾಲೇಜಿನ ಪ್ರಾಚಾರ್ಯ ಮಲ್ಲಿಕಾರ್ಜುನ ಬುಕ್ಕೆ ತಿಳಿಸಿದ್ದಾರೆ.
ಆಳಂದ ಪಟ್ಟಣದ ಜೀವನ ಜೋತಿ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯು ತಡಕಲ್ ಪಟ್ಟಣದ ಎಂಪಿಎoಜಿ ಬಾಲಕಿಯರ ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡ 'ಮಕ್ಕಳ ದಿನಾಚರಣೆ' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಮಕ್ಕಳಿಗೆ ಸದ್ಭಾವನೆ, ಪರಿಶ್ರಮ ಮತ್ತು ಪ್ರಾಮಾಣಿಕತೆಯ ಹಿತಕರ ಮಾರ್ಗವನ್ನು ತೋರಿಸಬೇಕಾಗಿದೆ. ಅವರು ಮುಂದುವರೆದ ಪ್ರತಿಯೊಂದು ಹೆಜ್ಜೆಯಲ್ಲಿ ದೇಶಾಭಿಮಾನ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಮಕ್ಕಳು ದೇಶದ ಭವಿಷ್ಯವೆಂದು ಪರಿಗಣಿಸಿ, ಅವರ ಶಿಕ್ಷಣದ ಹಕ್ಕುಗಳನ್ನು ಕಾಪಾಡಲು ನಾವು ಏನು ತಂತ್ರಗಳನ್ನು ರೂಪಿಸಬೇಕು ಎಂಬುದರ ಮೇಲೆ ಚಿಂತನೆ ನಡೆಸಬೇಕು. ಶಿಸ್ತು ಮತ್ತು ಸಂಸ್ಕಾರ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುತ್ತದೆ. ಚಾಚಾ ನೆಹರು ಅವರ ಜೀವನವನ್ನು ಅಳವಡಿಸಿಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಜೀವನ ಜೋತಿ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ ತಡಕಲ್ ಆಡಳಿತಾಧಿಕಾರಿ ರಾಘವೇಂದ್ರ ಚಿಂಚನಸೂರ ಅಧ್ಯಕ್ಷತೆ ವಹಿಸಿದರು. ಉಪನ್ಯಾಸಕ ರಾಜಶೇಖರ ಕಡಗಣ ಉಪನ್ಯಾಸ ನೀಡಿದರು.
ರವಿಂದ್ರ ಜಮಾದಾರ, ನಂದಿನಿ ಕಾಪ್ಟೆ, ಪ್ರೌಢಶಾಲೆ ಮುಖ್ಯ ಶಿಕ್ಷಕ ಮಲ್ಲಿನಾಥ ತುಕಾಣೆ, ಉಪನ್ಯಾಸಕ ಸಂಗಮೇಶ ಸ್ವಾಮಿ, ಸುಜಾತಾ ಗುತ್ತೇದಾರ, ಅಂಬ್ರೇಶ ಕಾಂಬಳೆ ಸೇರಿದಂತೆ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.