ಕಲಬುರಗಿ | ದತ್ತಾತ್ರೇಯ ದೇವಸ್ಥಾನದ ಅರ್ಚಕರ ಮಧ್ಯೆ ಹೊಡೆದಾಟ : ವಿಡಿಯೋ ವೈರಲ್

Update: 2024-11-17 12:16 GMT

ಕಲಬುರಗಿ : ಜಿಲ್ಲೆಯ ಸುಕ್ಷೇತ್ರ ದೇವಲ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನದ ಅರ್ಚಕರು ಭಕ್ತರ ಸಮ್ಮುಖದಲ್ಲಿ ಪರಸ್ಪರ ಹೊಡೆದಾಡಿಕೊಂಡ ವಿಡಿಯೋ ವೈರಲ್ ಆಗಿದೆ.

ದೇವಸ್ಥಾನದಲ್ಲಿ ವಲ್ಲಭ ಪೂಜಾರಿ ಎಂಬ ಅರ್ಚಕನ ಮೇಲೆ ಹಲ್ಲೆ ನಡೆದಿದ್ದು, ಗುಂಡು ಪೂಜಾರಿ, ಕಿರಣ್ ಪೂಜಾರಿ ಸೇರಿ ಹಲ್ಲೆ ನಡೆಸಿರುವುದು ದೇವಾಲಯದ ಸಿಸಿಟಿವಿ ಕ್ಯಾಮರಾಗಳಲ್ಲಿ ದಾಖಲಾಗಿದೆ.

ದೇವಸ್ಥಾನದ ಪೂಜಾ-ಕೈಂಕರ್ಯ ಪ್ರತಿ ವರ್ಷ ಒಂದೊಂದು ಕುಟುಂಬಕ್ಕೆ ವಹಿಸುವ ಪದ್ಧತಿ ರೂಢಿಗತವಾಗಿದ್ದು, ಈ ವರ್ಷ ವಲ್ಲಭ ಪೂಜಾರಿ ಕುಟುಂಬ ದತ್ತನ ಪೂಜಾ-ಕೈಂಕರ್ಯ ನಿರ್ವಹಿಸುತ್ತಿದೆ. ಈ ಮಧ್ಯೆ, ಗುಂಡು ಪೂಜಾರಿ, ಕಿರಣ್ ಪೂಜಾರಿ ಕಡೆಯವರನ್ನು ದೇವಾಲಯದ ಒಳಗೆ ಮೊದಲು ಬಿಡುವ ವಿಷಯಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿದೆ. ಈ ಗಲಾಟೆ ವಿಕೋಪಕ್ಕೆ ತಿರುಗಿದ್ದರಿಂದ ವಲ್ಲಭ ಪೂಜಾರಿಯ ಮೇಲೆ ಭಕ್ತರ ಸಮ್ಮುಖದಲ್ಲೇ ಗುಂಡು ಪೂಜಾರಿ ಮತ್ತು ಕಿರಣ್ ಪೂಜಾರಿ ಹಲ್ಲೆ ನಡೆಸಿದ್ದಾರೆ.

ಸಾರ್ವಜನಿಕ ಸ್ಥಳದಲ್ಲಿ ಅರ್ಚಕರು ಹೊಡೆದಾಡಿಕೊಂಡ ಹಿನ್ನೆಲೆಯಲ್ಲಿ ದೇವಲ ಗಾಣಗಾಪುರ ಠಾಣೆಯಲ್ಲಿ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News