ಕಲಬುರಗಿ | ಕುವೆಂಪು ಭಾಷಾ ಭಾರತಿ 'ಗೌರವ ಪ್ರಶಸ್ತಿ ಪ್ರಕಟ : ಬೋಡೆ ರಿಯಾಜ್ ಅಹ್ಮದ್'ಗೆ ಪ್ರಶಸ್ತಿ

Update: 2024-11-16 18:17 GMT

ಕಲಬುರಗಿ/ಬೆಂಗಳೂರು : ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ 2023 ಹಾಗೂ 2024ನೇ ಸಾಲಿನ ವಾರ್ಷಿಕ 'ಗೌರವ ಪ್ರಶಸ್ತಿ'ಗೆ ಹತ್ತು ಮಂದಿ ಲೇಖಕರು, ಅನುವಾದಕರನ್ನು ಆಯ್ಕೆ ಮಾಡಿ ಪ್ರಾಧಿಕಾರ ಪ್ರಕಟಿಸಿದೆ.

ಪ್ರಾಧಿಕಾರದ ಅಧ್ಯಕ್ಷ ಚನ್ನಪ್ಪ ಕಟ್ಟಿ ಅವರು ಪ್ರಶಸ್ತಿ ಪಟ್ಟಿಯನ್ನು ಶನಿವಾರ ಬಿಡುಗಡೆಗೊಳಿಸಿದ್ದು, ಅದರಲ್ಲಿ 2024ನೇ ಸಾಲಿಗೆ ಕಲಬುರಗಿಯ ಹಿರಿಯ ಸಾಹಿತಿ ಬೋಡೆ ರಿಯಾಜ್ ಅಹ್ಮದ್ ಅವರು ಆಯ್ಕೆಯಾಗಿದ್ದಾರೆ. ಅವರ ಜೊತೆಗೆ ಆರ್.ಕೆ.ಕುಲಕರ್ಣಿ, ಕರೀಗೌಡ ಬೀಚನಹಳ್ಳಿ, ರಾಜೇಂದ್ರ ಚೆನ್ನಿ ಮತ್ತು ಬಸು ಬೇವಿನಗಿಡದ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಪ್ರಶಸ್ತಿಯು 50 ಸಾವಿರ ನಗದು ಹಾಗೂ ಫಲಕ ಒಳಗೊಂಡಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಚನ್ನಪ್ಪ ಕಟ್ಟಿ ತಿಳಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News