ಕಲಬುರಗಿ | ಮೆಹತಾ ಶಾಲೆಯ ವಿದ್ಯಾರ್ಥಿನಿಯರಿಗೆ ʼಐಎನ್ಇಎಕ್ಸ್‌ʼ ಪ್ರಶಸ್ತಿ

Update: 2024-11-16 17:22 GMT

ಕಲಬುರಗಿ : ಗೋವಾದಲ್ಲಿ ನ.13ರಿಂದ 15ರವರೆಗೆ ನಡೆದ ಅಂತರ್‌ರಾಷ್ಟ್ರೀಯ ಮಟ್ಟದ ವಸ್ತು ಪ್ರದರ್ಶನದಲ್ಲಿ ನಗರದ ಎಸ್ಆರ್‌ಎನ್ ಮೆಹತಾ ಶಾಲೆಯ ವಿದ್ಯಾರ್ಥಿನಿಯರಿಬ್ಬರಿಗೆ 'ಬೆಸ್ಟ್ ನ್ಯಾಷನಲ್ ಇನೋವೇಷನ್ ಅವಾರ್ಡ್' ಜೊತೆಗೆ ಚಿನ್ನದ ಪದಕ ಸಿಕ್ಕಿದೆ' ಎಂದು ಶಾಲೆಯ ವ್ಯವಸ್ಥಾಪಕ ನಿರ್ದೇಶಕ ಪ್ರೀತಮ್ ಮೆಹತಾ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಐಎನ್ಇಎಕ್ಸ್- ಇಂಡಿಯಾ ಇಂಟರ್‌ನ್ಯಾಷನಲ್ ಇನೋವೇಷನ್ ಆ್ಯಂಡ್ ಇನ್ವೆನ್ಯನ್ ಎಕ್ಸ್ ವತಿಯಿಂದ ಗೋವಾದಲ್ಲಿ ವಸ್ತು ಪ್ರದರ್ಶನ ಆಯೋಜಿಸಲಾಗಿತ್ತು. ಮೆಹತಾ ಶಾಲೆಯ ಶಿಕ್ಷಕಿ ಸುಮಯ್ಯಾ ಖಾನ್ ಅವರ ನೇತೃತ್ವದಲ್ಲಿ ಪಾಲ್ಗೊಂಡಿದ್ದ ವಸ್ತು ಪ್ರದರ್ಶನದಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿನಿಯರಾದ ಸ್ಮಿತಾ ಅಲೇಗಾಂವ್ ಮತ್ತು ವೇದಾ ಮಸಾಲಿ ಅವರು 'ಪ್ಲಾಸ್ಟಿಕ್ ಮಾಲಿನ್ಯಕ್ಕೆ ಪರಿಹಾರ' ಕುರಿತ ಪ್ರಾಜೆಕ್ಟ್ ಪ್ರದರ್ಶಿಸಿ, ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದರು.

ಈ ನಮ್ಮ ಯೋಜನೆಯು ಪ್ರಕೃತಿ ಸ್ನೇಹಿಯಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿಸಬಹುದಾಗಿದೆ. ಸಾರ್ವಜನಿಕರು ಪ್ಲಾಸ್ಟಿಕ್ ಬಾಟಲ್ ಮತ್ತು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಈ ಯಂತ್ರದಲ್ಲಿ ಹಾಕಬಹುದು. ಯಂತ್ರವು ತ್ಯಾಜ್ಯವನ್ನು ಮರುಬಳಕೆಗೆ ಸಹಕರಿಸುತ್ತದೆ. ಅಲ್ಲದೆ ನಮ್ಮ ಭೂಮಿಯನ್ನು ಸಂರಕ್ಷಿಸುವಲ್ಲಿ ನೆರವಾಗುತ್ತದೆ ಎಂದು ತಿಳಿಸಿದರು.

ದೇಶದಾದ್ಯಂತ ಆಯ್ಕೆಯಾದ 60ಕ್ಕೂ ಹೆಚ್ಚು ಯೋಜನೆಗಳು ಈ ಪ್ರದರ್ಶನಕ್ಕೆ ಬಂದಿದ್ದವು. ಇಂತಹ ಕಠಿಣ ಸ್ಪರ್ಧೆ ನಡುವೆ ನಮ್ಮ ವಿದ್ಯಾರ್ಥಿಗಳು ಪ್ರಶಸ್ತಿ ಪಡೆದಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪ್ರೀತಿ ಮೆಹತಾ, ಚಕೋರ ಮೆಹತಾ, ಸುಮಯ್ಯಾ ಖಾನ್, ವಿದ್ಯಾರ್ಥಿನಿಯರಾದ ಸ್ಮಿತಾ ಅಲೇಗಾಂವ್ ಮತ್ತು ವೇದಾ ಮಾಸಾಲಿ ಇದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News