ಕಲಬುರಗಿ | ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಹೊತ್ತಿ ಉರಿದ ಫರ್ನಿಚರ್ ಅಂಗಡಿ : ಅಪಾರ ಹಾನಿ
Update: 2025-04-15 11:10 IST

ಕಲಬುರಗಿ : ನಗರದಲ್ಲಿ ಹಲವು ಕಡೆ ಬೆಂಕಿಯ ಅವಘಡ ಸಂಭವಿಸುತ್ತಲೇ ಇದ್ದು, ಇಂದು(ಮಾ.15) ನಗರದಲ್ಲಿ
ಮತ್ತೊಂದು ಅಂಗಡಿ ಬೆಂಕಿಗೆ ಆಹುತಿಯಾಗಿದೆ.
ನಗರದ ವಸಂತ ರಸ್ತೆ ಬದಿ ಹಾಕಿದ್ದ ಫರ್ನಿಚರ್ ಅಂಗಡಿಯೊಂದು ಶಾರ್ಟ್ ಸರ್ಕ್ಯೂಟ್ ನಿಂದಾಗಿ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಬೆಂಕಿಯ ಕೆನ್ನಾಲಿಗೆ ಹೊತ್ತಿಕೊಂಡು ಹಳೆ ಫರ್ನಿಚರ್ ಜೊತೆಗೆ ಒಂದು ಕಾರು ಕೂಡ ಬೆಂಕಿಗೆ ಆಹುತಿಯಾಗಿದೆ. ಬೆಂಕಿ ಅವಘಡದಿಂದಾಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

