ಕಲಬುರಗಿ | ದಕ್ಷಿಣ ವಲಯ ಅಂತರ್ ವಿವಿ ವಾಲಿಬಾಲ್ ಪಂದ್ಯದಲ್ಲಿ ಗುಲ್ಬರ್ಗಾ ವಿವಿ ತಂಡ ಭಾಗಿ
ಕಲಬುರಗಿ : ಕೇರಳ ವಿಶ್ವವಿದ್ಯಾಲಯದ ತ್ರಿವೇಂದ್ರಮ್ ನಲ್ಲಿ ಡಿ.18 ರಿಂದ ಡಿ.22ರವರೆಗೆ ನಡೆಯಲಿರುವ ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾಲಯ ವಾಲಿಬಾಲ್ ಪಂದ್ಯದಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ (ಪುರುಷ ) ತಂಡವು ಭಾಗವಹಿಸಲಿದೆ.
ತಂಡದ ನಾಯಕ ರವಿ ಹಾಗೂ ಸದಸ್ಯರಾಗಿ ಶಹಾಬಾಝ್ ಖಾನ್, ಮಂಜುನಾಥ್, ಶಭಿರ್ ಅಹ್ಮದ್, ಭೀಮರಾಯ, ರೋಹಿತ್, ಕೃಷ್ಣ, ಶಜ್ಜದ್ದ್, ನಾಗಶೇಟ್ಟಿ, ಕೈಝರ್, ಸುದೀಪ್, ಅಮರೇಶ್ ಇವರು ಭಾಗವಹಿಸಲಿದ್ದು, ತಂಡದ ವ್ಯವಸ್ಥಾಪಕ ಹಾಗೂ ತರಬೇತಿದಾರರಾಗಿ ಮನ್ನಾಏಖೆಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ಬೋಧಕ ಶ್ರೀ.ಬಸವರಾಜ್ ತೆರಳುವರು.
ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ದಯಾನಂದ ಅಗಸರ, ಕುಲಸಚಿವ ಪ್ರೊ. ರಾಜನಾಳ್ಕರ್ ಲಕ್ಷ್ಮಣ, ಮೌಲ್ಯಮಾಪನ ಕುಲಸಚಿವೆ ಪ್ರೊ.ಮೇಧಾವಿನಿ ಕಟ್ಟಿ, ವಿತ್ತಾಧಿಕಾರಿ ಗಾಯತ್ರಿ, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಎನ್.ಜಿ.ಕಣ್ಣೂರು, ದೈಹಿಕ ಶಿಕ್ಷಣ ವಿಭಾಗದ ಸಂಯೋಜಕ ಹಾಗೂ ಪ್ರಾಂಶುಪಾಲ ಡಾ. ಎಸ್.ಹೆಚ್. ಜಂಗೆ, ಯೋಗ ತಾಂತ್ರಿಕ ಸಹಾಯಕ ಡಾ.ಚಂದ್ರಕಾಂತ ಬಿರಾದಾರ, ಜಿಮ್ನಾಸ್ಟಿಕ್ ತಾಂತ್ರಿಕ ಸಹಾಯಕ ಪ್ರಶಾಂತಕುಮಾರ್ ಡಿ ಹಾಗೂ ಕ್ರೀಡಾ ಸಹಾಯಕ ಅರುಣ್ ಕುಮಾರ್ ಹೆಚ್. ಇವರು ತಂಡಕ್ಕೆ ಶುಭ ಹಾರೈಸಿದ್ದಾರೆ.