ಕಲಬುರಗಿ | ಇಂಡಿಯನ್ ರಾಯಲ್ ಅಕಾಡೆಮಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ : ರೆಹಮಾನ್ ಪಟೇಲ್

Update: 2024-12-18 10:22 GMT

ಕಲಬುರಗಿ : ನಗರದ ಇಂಡಿಯನ್ ರಾಯಲ್ ಅಕಾಡೆಮಿ ಆಫ್ ಆರ್ಟ್ ಅಂಡ್ ಕಲ್ಚರ್ ತನ್ನ 20ನೇ ವಾರ್ಷಿಕ ಇಂಡಿಯನ್ ರಾಯಲ್ ಅಕಾಡೆಮಿ ರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರಕಟಿಸಿದೆ.

ಭಾರತೀಯ ಪ್ರಸಿದ್ಧ ಕಲಾವಿದರ ಹೆಸರಿನಲ್ಲಿ ಐದು ಕಲಾವಿದರಿಗೆ ನಗದು ಬಹುಮಾನ ನೀಡಲಾಗುವುದು. ಜೈಪುರದ ಮುಹಮ್ಮದ್ ಸಲೀಂ, ಮೈಸೂರು ಶಿಲ್ಪಿ ಆನಂದಬಾಬು ಎಂ.ಅಂಬರಖಾನೆ, ಬೆಂಗಳೂರಿನ ಕಲಾವಿದ ಜಿ.ಎಸ್.ಬಿ.ಅಗ್ನಿಹೋತ್ರಿ, ನಾಗಪುರದ ಕಲಾವಿದೆ ಸುಹಾನಿ ಜೈನ್, ಕಲಾವಿದ ವಾಜಿದ್ಸಾಜಿದ್ ಅವರಿಗೆ ಪ್ರಶಸ್ತಿ ಲಭಿಸಿದೆ ಎಂದು ಅಕಾಡೆಮಿ ಅಧ್ಯಕ್ಷ ರೆಹಮಾನ್ ಪಟೇಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದಲ್ಲದೆ ಅಕಾಡೆಮಿಯು 30 ಕಲಾವಿದರನ್ನು ಅತ್ಯುತ್ತಮ ಕಲಾಕೃತಿಗಳಿಗಾಗಿ ಚಿನ್ನದ ಪದಕಗಳಿಗೆ ಮತ್ತು 20 ಕಲಾವಿದರನ್ನು ವಿವಿಧ ವಿಭಾಗಗಳಲ್ಲಿ ಮೆರಿಟ್ ಪ್ರಶಸ್ತಿಗಳಿಗೆ ಆಯ್ಕೆ ಮಾಡಿದೆ.

ಕರ್ನಾಟಕ ಲಲಿತಕಲಾ ವಿಶ್ವವಿದ್ಯಾಲಯದ ಮಾಜಿ ವಿಶೇಷ ಅಧಿಕಾರಿ ಡಾ.ಎಸ್.ಸಿ.ಪಾಟೀಲ್ ಅವರು ಡಿ. 4ರಂದು ಬೆಳಗ್ಗೆ 11 ಗಂಟೆಗೆ ಕಲಾ ಸೌಧ (ಆರ್ಟ್ ಗ್ಯಾಲರಿ), ಬಾಪುಗೌಡ ದರ್ಶನಾಪುರ ರಂಗಮಂದಿರ, ಕನ್ನಡ ಭವನದಲ್ಲಿ ಪ್ರಶಸ್ತಿ ವಿಜೇತರ ಕಲಾಕೃತಿಗಳ ಪ್ರದರ್ಶನವನ್ನು ಉದ್ಘಾಟಿಸಿ, ಪ್ರಶಸ್ತಿಗಳನ್ನು ವಿತರಿಸುವರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವ ಅಜೀಂಪಾಷಾ, ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಆಗಮಿಸುವರು ಎಂದು ರೆಹಮಾನ್ ಪಟೇಲ್ ಮಾಹಿತಿ ನೀಡಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News