ಕಲಬುರಗಿ | ಜ.28ರಂದು ವಿಜ್ಞಾನ ಲೋಕ ಪ್ರದರ್ಶನದ ಉದ್ಘಾಟನೆ : ಲಕ್ಷ್ಮಿನಾರಾಯಣ್ ಹೆಬ್ಬಾರ್

Update: 2025-01-07 13:56 GMT

ಕಲಬುರಗಿ: ಜ.29ರಿಂದ ಫೆ.6ರವರೆಗೆ ನಡೆಯಲಿರುವ 7ನೇ ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಜ.28 ರಂದು ಮಧ್ಯಾಹ್ನ 3 ಗಂಟೆಗೆ ವಿಜ್ಞಾನ ಲೋಕದ ಉದ್ಘಾಟನೆ ನಡೆಯಲಿದೆ ಎಂದು ಉತ್ಸವದ ವೈಜ್ಞಾನಿಕ ಸಲಹೆಗಾರರು ಸಿ.ಎನ್.ಲಕ್ಷ್ಮಿನಾರಾಯಣ್ ಹೆಬ್ಬಾರ್ ಅವರು ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಲಬುರಗಿ - ಸೇಡಂ ರಾಜ್ಯ ಹೆದ್ದಾರಿ ಹೆದ್ದಾರಿಯಲ್ಲಿ ಬರುವ ಬೀರನಹಳ್ಳಿ ಸಮೀಪದಲ್ಲಿ 240 ಎಕರೆ ಭೂಪ್ರದೇಶದಲ್ಲಿ ನಡೆಯುತ್ತಿರುವ ಉತ್ಸವದಲ್ಲಿ 6 ಎಕರೆ ಪ್ರದೇಶದಲ್ಲಿ ಅಗಸ್ತ್ಯ ಇಂಟರ್ನ್ಯಾಶನಲ್ ಫೌಂಡೇಶನ್ ವತಿಯಿಂದ ವಿಜ್ಞಾನಕ್ಕೆ ಸಂಬಂಧಿಸಿದ 400 ಮಾದರಿಗಳನ್ನು ಪ್ರದರ್ಶಿಸಲಾಗುವುದು, ಈ ವಿಜ್ಞಾನದ ಮಾದರಿಗಳ ಕುರಿತಾಗಿ ಸಂಪೂರ್ಣ ವಿವರಣೆ ನೀಡಲು ಸೇಡಂ ತಾಲ್ಲೂಕಿನ ಸುತ್ತಮುತ್ತಲಿನ ಶಾಲೆಗಳ 1500 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ, ಅವರಿಗೆ ತರಬೇತಿ ನೀಡಲಾಗಿದೆ ಎಂದರು.

'ಮಹರ್ಷಿ ಕಣಾದನಿಂದ ಕಲಾಂವರೆಗೆ' ಎಂಬ ಶೀರ್ಷಿಕೆಯಡಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಮಹತ್ವದ ಕೊಡುಗೆ ನೀಡಿರುವ ಹಲವು ವಿಜ್ಞಾನಿಗಳ ಚಿತ್ರಸಾಹಿತ ಪ್ರದರ್ಶನ ಏರ್ಪಡಿಸಲಾಗಿದೆ, ಸಂಚಾರ ಪ್ರದರ್ಶನ ಏರ್ಪಡಿಸಲು ಇಸ್ರೋ, ಜಿಲ್ಲಾ ವಿಜ್ಞಾನ ಕೇಂದ್ರ, ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಸೇರಿದಂತೆ ಹಲವು ಸಂಸ್ಥೆಗಳಿಗೆ ಆಹ್ವಾನ ನೀಡಲಾಗಿದೆ ಎಂದು ತಿಳಿಸಿದರು.

ವಿಜ್ಞಾನ ಲೋಕದ ಉದ್ಘಾಟನೆಯನ್ನು ಗುಲ್ಬರ್ಗಾ ವಿವಿಯ ವಿಶ್ರಾಂತ ಉಪಕುಲಪತಿ ಡಾ.ಬಿ.ಜಿ.ಮೂಲಿಮನಿ ನೆರವೇರಿಸಲಿದ್ದಾರೆ, ಗುಲ್ಬರ್ಗಾ ವಿವಿಯ ವಿಜ್ಞಾನ ತಂತ್ರಜ್ಞಾನ ವಿಭಾಗದ ಡೀನ್ ಡಾ.ಸಿ.ಸುಲೋಚನಾ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಅಧ್ಯಕ್ಷತೆಯನ್ನು ಅಗಸ್ತ್ಯ ಇಂಟರ್ನ್ಯಾಶನಲ್ ಸಂಸ್ಥಾಪಕ ಅಧ್ಯಕ್ಷ ರಾಮಜೀರಾಘವನ್ ವಹಿಸಲಿದ್ದಾರೆ. ಫೆ.6ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಹಿರಿಯ ಲೇಖಕರು ನಾ.ಸೋಮೇಶ್ವರ ಅವರು ಸೇರಿದಂತೆ ಇತರ ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸತ್ಯಕುಮಾರ್ ಬಾಗೋಡಿ, ಬಸವರಾಜ್ ಗಣೂರೆ, ಪ್ರಭಾಕರ್ ಜೋಶಿ, ಸದಾನಂದ್ ಪೆರ್ಲ ಮತ್ತಿತರರು ಇದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News