ಕಲಬುರಗಿ | ಜ.17 ರಂದು ಮಿನಿ ಉದ್ಯೋಗ ಮೇಳ

Update: 2025-01-13 14:10 GMT

ಸಾಂದರ್ಭಿಕ ಚಿತ್ರ

ಕಲಬುರಗಿ : ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಸರ್ಕಾರಿ ಐಟಿಐ ಕಾಲೇಜು ಹಿಂದುಗಡೆಯಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಇದೇ ಜ.17 ರಂದು ಬೆಳಿಗ್ಗೆ10.30 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಮಿನಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಆಶೀರ್ವಾದ ಮೈಕ್ರೋ ಫೈನಾನ್ಸ್ದಲ್ಲಿ ಫೀಲ್ಡ್ ಡೆವಲಪ್ಮೇಂಟ್ ಆಫೀಸರ್ ಹುದ್ದೆಗೆ ಎಸೆಸೆಲ್ಸಿ/ಪಿಯುಸಿ/ಐಟಿಐ/ ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ 18 ರಿಂದ 35 ವರ್ಷದೊಳಗಿರಬೇಕು. ಟ್ರಾನ್ಕಾನ್ ಆಟೋಮೇಷನ್ ಆಂಡ್ ಕನ್ವೇಯರ್ಸ್ದಲ್ಲಿ ಸೇಲ್ಸ್ ಇಂಜಿನಿಯರ್ ಹುದ್ದೆಗೆ ಬಿ.ಇ/ ಬಿ.ಟೆಕ್ / ಡಿಪ್ಲೋಮಾ (ಮೆಕ್ಯಾನಿಕಲ್ ಮಾತ್ರ) ಪಾಸಾಗಿರಬೇಕು. ವಯೋಮಿತಿ 18 ರಿಂದ 30 ವರ್ಷದೊಳಗಿರಬೇಕು.

ಬ್ಲೂಸ್ಮಾರ್ಟ್ ಕ್ಯಾಬ್ (ಇವಿ) ದಲ್ಲಿ ಡ್ರೈವರ್ ಹುದ್ದೆಗೆ ಎಸೆಸೆಲ್ಸಿ /ಪಿಯುಸಿ/ಐಟಿಐ/ ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ 21 ರಿಂದ 50 ವರ್ಷದೊಳಗಿರಬೇಕು.

ಸ್ವತಂತ್ರ ಮೈಕ್ರೋ ಫೈನಾನ್ಸ್ದಲ್ಲಿ ಫೀಲ್ಡ್ ಆಫೀಸರ್ ಹುದ್ದೆಗೆ ಪಿಯುಸಿ/ ಐಟಿಐ/ ಡಿಪ್ಲೋಮಾ/ ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ 18 ರಿಂದ 27 ವರ್ಷದೊಳಗಿರಬೇಕು. ಬ್ರ್ಯಾಂಚ್ ಮ್ಯಾನೇಜರ್ ಹುದ್ದೆಗೆ ಪಿಯುಸಿ/ ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ 18 ರಿಂದ 30 ವರ್ಷದೊಳಗಿರಬೇಕು.

ಝೋಮ್ಯಾಟೋದಲ್ಲಿ ಡೆಲಿವರಿ ಎಕ್ಸಿಕ್ಯೊಟಿವ್ ಹುದ್ದೆಗೆ ಎಸೆಸೆಲ್ಸಿ /ಪಿಯುಸಿ/ ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ 18 ರಿಂದ 45 ವರ್ಷದೊಳಗಿರಬೇಕು.

ಕನೆಕ್ಟ್ ಬಿಜಿನೆಸ್ ಸಲ್ಯೂಶನ್ದಲ್ಲಿ ವಾಸ್ಸ್ ಆ್ಯಂಡ್ ನಾನ್ ವಾಸ್ಸ್ ಪ್ರೋಸೆಸ್ ಹುದ್ದೆಗೆ ಪಿಯುಸಿ/ ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ 18 ರಿಂದ 31 ವರ್ಷದೊಳಗಿರಬೇಕು.

ಮೆಡ್ಪ್ಲಸ್ದಲ್ಲಿ ಫಾರ್ಮಾಸಿಸ್ಟ್ ಹುದ್ದೆಗೆ ಡಿ/ಬಿ/ಎಮ್ ಫಾರ್ಮಾಸಿ ಪಾಸಾಗಿರಬೇಕು. ಸಿ.ಎಸ್.ಎ. ಹುದ್ದೆ, ಜ್ಯೂ. ಅಸಿಸ್ಟೆಂಟ್ ಹುದ್ದೆ ಹಾಗೂ ಆಡಿಟ್ ಅಸಿಸ್ಟೆಂಟ್ ಹುದ್ದೆಗಳಿಗೆ ಎಸೆಸೆಲ್ಸಿ /ಪಿಯುಸಿ/ ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ 18 ರಿಂದ 30 ವರ್ಷದೊಳಗಿರಬೇಕು.

ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ಎಲ್ಲಾ ಅಂಕಪಟ್ಟಿಗಳ ಝೆರಾಕ್ಸ್, ರೆಸ್ಯೂಮ್ (ಬಯೋಡೇಟಾ) ಭಾವಚಿತ್ರಗಳು ಹಾಗೂ ಆಧಾರ್ ಕಾರ್ಡ್ ನೊಂದಿಗೆ ಮೇಲ್ಕಂಡ ದಿನದಂದು ನಡೆಯುವ ಮಿನಿ ಉದ್ಯೋಗಮೇಳದಲ್ಲಿ ಭಾಗವಹಿಸಬಹುದಾಗಿದೆ.

ನೇರ ಸಂದರ್ಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆಯನ್ನು ನೀಡಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಹಾಗೂ ದೂರವಾಣಿ ಸಂಖ್ಯೆ 08472-274846, ಮೊಬೈಲ್ ಸಂಖ್ಯೆ 9620095270 ಗೆ ಸಂಪರ್ಕಿಸಲು ಕೋರಲಾಗಿದೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News