ಕಲಬುರಗಿ | ದೇಶದ ರಕ್ಷಣೆ ಪ್ರತಿಯೊಬ್ಬರ ಹೊಣೆ : ನಿವೃತ್ತ ಯೋಧ ರೇಣುಕಾಚಾರ್ಯ ಸ್ಥಾವರ ಮಠ

Update: 2025-01-15 10:37 GMT

ಕಲಬುರಗಿ : ದೇಶದ ರಕ್ಷಣೆಗಾಗಿ ಸೈನ್ಯ ಸೇರುವುದು ಸ್ವಾಭಿಮಾನದ ಸಂಕೇತ. ಶತ್ರುಗಳನ್ನು ಸದೆಬಡಿಯಲು ಕೇವಲ ಯೋಧರಷ್ಟೇ ಅಲ್ಲದೆ ಇದು ದೇಶದ ಪ್ರತಿಯೊಬ್ಬ ಪ್ರಜೆಯ ಹೊಣೆಯೂ ಆಗಿದೆ ಎಂದು ನಿವೃತ್ತ ಯೋಧ ರೇಣುಕಾಚಾರ್ಯ ಸ್ಥಾವರಮಠ ಹೇಳಿದರು.

ಕಲಬುರಗಿ ನಗರದ ಸರಕಾರಿ ಮಹಿಳಾ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ನಾಲ್ಕುಚಕ್ರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಇಂದು ಆಯೋಜಿಸಿದ್ದ ʼವೀರ ಯೋಧರ ದಿನಾಚರಣೆಯ ಕಾರ್ಯಕ್ರಮʼದಲ್ಲಿ ಭಾಗವಹಿಸಿ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಇನ್ನೋರ್ವ ಮಾಜಿ ಯೋಧ ಶ್ರೀಶೈಲ್ ನಂದೇನಿ ಅವರು, ನಮ್ಮ ದೇಶದ ರಕ್ಷಣೆಗಾಗಿ ನಾವು ಯುದ್ಧದಲ್ಲಿ ಹುತಾತ್ಮರಾಗಲು ಹಿಂದೇಟು ಹಾಕುವುದಿಲ್ಲ. ಧೈರ್ಯದಿಂದ ಎದುರಾಳಿಯನ್ನು ಸದೆ ಬಡೆಯುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಸುರೇಶ ಬಡಿಗೇರ, ನಮ್ಮ ದೇಶ ಕಾಯುವ ಸೈನಿಕ ಮತ್ತು ಅನ್ನ ನೀಡುವ ರೈತ ನಮ್ಮ ಬದುಕಿನ ಎರಡು ಕಣ್ಣುಗಳಿದ್ದಂತೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ನಾಲ್ಕು ಚಕ್ರ ಚಾರಿಟೇಬಲ್ ಟ್ರಸ್ಟ್ ಮುಖ್ಯಸ್ಥೆ ಮಾಲಾ ಕಣ್ಣಿ, ವೀರ ಯೋಧರ ಸಮಗ್ರ ಬದುಕು ಇಂದಿನ ಯುವಕರಿಗೆ ಮಾದರಿಯಾಗಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ.ಮಹಾದೇವ ಬಡಿಗೇರ ಅವರು, ಸಮಗ್ರ ಭಾರತದ ಅಭಿವೃದ್ಧಿಗೆ ವೀರ ಸೇನಾನಿಗಳ ತ್ಯಾಗ ಮತ್ತು ಬಲಿದಾನಗಳು ಮಾದರಿಯಾಗಿವೆ ಎಂದು ಅಭಿಪ್ರಾಯಪಟ್ಟರು.

ಡಾ.ಮುರಗೆ ಪ್ರಕಾಶ, ಶಿವಶರಣಪ್ಪ ಬಿರಾದಾರ, ಪದ್ಮರಾಜ ರಾಸಣಗಿ, ಶರಣು ಚಿಕ್ಕಳ್ಳಿ ಸೇರಿದಂತೆ ಅನೇಕರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಕಾರ್ಯಕ್ರಮದ ನಂತರ ವೀರ ಯೋಧರ ಜೊತೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸಂವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಸಮಾರಂಭದಲ್ಲಿ ನಾಲ್ಕು ಚಕ್ರ ಚಾರಿಟೇಬಲ್ ಟ್ರಸ್ಟ್ ನ ಮುಖ್ಯಸ್ಥರಾದ ಆನಂದತೀರ್ಥ ಜೋಷಿ, ಲಿಂಗರಾಜ ಡಾಂಗೆ, ಮಡಿವಾಳಪ್ಪ ಅಮರಾವತಿ ವಿಜಯಲಕ್ಷ್ಮಿ ಹಿರೇಮಠ, ಶೀಲಾ ಕಲಬುರಗಿ ಸೇರಿದಂತೆ ಅನೇಕರು ಹಾಜರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News