ಕಲಬುರಗಿ | ಸಿದ್ಧರಾಮೇಶ್ವರರು ಕಾಯಕದೊಂದಿಗೆ ಸಮುದಾಯ ಏಳಿಗೆಗಾಗಿ ಶ್ರಮಿಸಿದವರು: ಶಾಸಕ ಬಿ.ಆರ್.ಪಾಟೀಲ್

Update: 2025-01-14 16:46 GMT

ಕಲಬುರಗಿ : ಶಿವಶರಣ ಸಿದ್ಧರಾಮೇಶ್ವರರು ಕಾಯಕ ಮಾಡುತ್ತಾ ಜನರನ್ನು ಒಗ್ಗೂಡಿಸಿಕೊಂಡು ಸಮುದಾಯದ ಬದುಕಿಗಾಗಿ ಹಗಲಿರಳು ಶ್ರಮಿಸಿದ್ದಾರೆಂದು ಮುಖ್ಯಮಂತ್ರಿ ಸಲಹೆಗಾರ, ಶಾಸಕ ಬಿ.ಆರ್.ಪಾಟೀಲ್ ಹೇಳಿದರು.

ಆಳಂದ ಪಟ್ಟಣದ ವೆಂಕಟೇಶ್ವರ ನಗರದ ಜೈ ಹನುಮಾನ ಮಂದಿರದಲ್ಲಿ ಏರ್ಪಡಿಸಿದ ಶ್ರೀ ಸಿದ್ಧರಾಮೇಶ್ವರ ಜಯಂತೋತ್ಸವ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಕಲೆ, ಸಂಸ್ಕೃತಿಕ, ನಾಗರೀಕತೆಗೆ ತನ್ನದೇ ಕೊಡುಗೆ ನೀಡಿರುವ ಈ ಸಮಾಜವು ತಲೆಮಾರುಗಳಿಂದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದಿದೆ, ಇವರನ್ನು ಗುರುತಿಸುವ ಕಾರ್ಯ ಸರಕಾರ ಮಾಡಬೇಕಾಗಿದೆ. ಸಮೂದಾಯದ ಜನರ ಮೌಢ್ಯಚಾರಣೆ, ಅಂಧ ಸಂಪ್ರದಾಯಗಳಲ್ಲಿ ವಚನೆ, ಆರ್ಥಿಕ ಸಂಕಷ್ಟಕ್ಕೆ ಒಳಗಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಸಿದ್ಧರಾಮೇಶ್ವರರು ಸಮಾಜಕ್ಕೆ ಕೊಡುಗೆ ಅಪಾರವಾಗಿದೆ ಎಂದರು.

ಪುರಸಭೆ ಸದಸ್ಯ ಈರಣ್ಣಾ ಹತ್ತರಕಿ ಮತ್ತು ಸುರೇಶ ದಂಡಗೂಳೆ, ಶಾಮರಾವ ಗುತ್ತೇದಾರ, ರಾಜಶೇಖರ ಯಂಕoಚಿ, ಸಂಜಯ ನಾಯಕ, ಲಕ್ಷ್ಮಣ ದಂಡಗೂಳೆ, ಹಣಮಂತ ಪೂಜಾರಿ, ಸಿದ್ಧು ಪಾಟೀಲ್, ಕನಕಪ್ಪ, ಸುರೇಶ, ದಿಲೀಪ ಕ್ಷೀರಸಾಗರ ಸೇರಿದಂತೆ ನಗರ ಮಹಿಳೆಯರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News