ಕಲಬುರಗಿ | ಆಂದೋಲಾ ಸಿದ್ಧಲಿಂಗಶ್ರೀ ಗಡಿಪಾರಿಗೆ ಎ.ಬಿ.ಹೊಸಮನಿ ಆಗ್ರಹ

Update: 2025-01-14 16:14 GMT

ಕಲಬುರಗಿ : ಶ್ರೀರಾಮ ಸೇನೆಯ ರಾಷ್ಟ್ರೀಯ ಗೌರವಾಧ್ಯಕ್ಷ ಅಂದೋಲಾದ ಶ್ರೀ ಸಿದ್ಧಲಿಂಗ ಸ್ವಾಮೀಜಿಯನ್ನು ಬಂಧಿಸಿ, ಅವರನ್ನು ಕೂಡಲೇ ಗಡಿಪಾರು ಮಾಡುವಂತೆ ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಮುಖಂಡ ಎ.ಬಿ.ಹೊಸಮನಿ ಆಗ್ರಹಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಂದೋಲಾದ ಸ್ವಾಮೀಜಿ ಅವರು ಅಂಬೇಡ್ಕರ್ ಪರ, ದಲಿತ ಪರ ಹೋರಾಟಗಾರರಿಗೆ ರಾತ್ರಿ ಊಟಕ್ಕೂ ಗತಿಯಿಲ್ಲ ಎಂದು ಹೇಳಿಕೆ ನೀಡಿ, ದಲಿತ ಸಮುದಾಯದ ಹೋರಾಟಗಾರರಿಗೆ ಅವಮಾನಿಸಿದ್ದಾರೆ, ಹಾಗಾಗಿ ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇವೆ, ನಮ್ಮ ದೂರಿನನ್ವಯ ಸ್ವಾಮೀಜಿ ವಿರುದ್ಧ ಜಾತಿ ನಿಂದನಾ ಕೇಸ್ ಸೋಮವಾರ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದರು.

ಬಸವಣ್ಣನವರ ತತ್ವಗಳನ್ನು ಇತರರಿಗೆ ಹೇಳುವ ತಾವು ಯಾವ ಕಾಯಕ ಮಾಡುತ್ತಿದ್ದೀರಿ? ಧರ್ಮ ಧರ್ಮಗಳ ಮತ್ತು ಜಾತಿ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತಿ ಬೆಂಕಿ ಹಚ್ಚವು ಕೆಲಸ ಮಾಡುತ್ತಿರುವ ಈ ಸ್ವಾಮೀಜಿಯನ್ನು ಕೂಡಲೇ ಜಿಲ್ಲೆಯಿಂದ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.

ಸ್ವಾಮೀಜಿಯಾಗಿ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡದೇ ಒಬ್ಬ ರಾಜಕಾರಣಿಯಂತೆ ಮನಬಂದಂತೆ ಹೇಳಿಕೆ ನೀಡುವುದು ಮಾಡುತ್ತಿದ್ದಾರೆ, ಅವರು ಮಠಕ್ಕೆ ಯೋಗ್ಯರಲ್ಲ, ಖಾವಿ ಬಟ್ಟೆ ತ್ಯಜಸಿ ರಾಜಕಾರಣಕ್ಕೆ ಹೋಗಿ ಎಂದರು.

ಸ್ವಾಮೀಜಿ ಮೇಲಿರುವ ಎಲ್ಲ ಪ್ರಕರಣಗಳನ್ನು ಕ್ರೋಢಿಕರಿಸಿ ಅವರನ್ನು ಬಂಧಿಸಿ, ಗಡಿಪಾರು ಮಾಡುವಂತೆ ಜಿಲ್ಲಾಡಳಿತಕ್ಕೆ ಗಡವು ನೀಡುತ್ತೇವೆ, ಒಂದು ವೇಳೆ ಗಡುವಿನ ಒಳಗೆ ಹೊರಗೆ ಹಾಕದಿದ್ದರೆ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಕಾಶ ಮೂಲಭಾರತಿ, ಸಂತೋಷ ಮೇಲ್ಮನಿ, ದೇವಿಂದ್ರ ಸಿನ್ನೂರ, ಅರ್ಜುನ ಸೇರಿದಂತೆ ಇತರರು ಇದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News