ಕಲಬುರಗಿ | ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತ್ಯೋತ್ಸವಕ್ಕೆ ಅದ್ಧೂರಿ ಚಾಲನೆ
ಕಲಬುರಗಿ : ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಗರದ ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರ 853ನೇ ಜಯಂತ್ಯೋತ್ಸವದ ಕಾರ್ಯಕ್ರಮವನ್ನು ಕೆಕೆಆರ್ ಡಿಬಿ ಅಧ್ಯಕ್ಷ, ಜೇವರ್ಗಿ ಶಾಸಕ ಡಾ.ಅಜಯಸಿಂಗ್ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ವೀರಮಹಾಂತ ಶಿವಾಚಾರ್ಯರು, ಶಾಸಕರಾದ ಅಲ್ಲಮಪ್ರಭು ಪಾಟೀಲ್, ಸುನೀಲ ವಲ್ಲ್ಯಾಪುರೆ, ಬಸವರಾಜ ಮತ್ತಿಮಡು, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಜಿ.ಪಂ. ಯೋಜನಾ ಅಧಿಕಾರಿ ಜಗದೇವ, ಡಿಸಿಪಿ ರವಿನಾಯಕ, ಉಪನ್ಯಾಸಕ ಡಾ.ಗೀರಿಶ ಯಡ್ರಾಮಿ, ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಜಯಂತ್ಯೋತ್ಸವದ ಅಧ್ಯಕ್ಷ ಗುಂಡಪ್ಪ ಸಾಳಂಕೆ, ಮಾಜಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಕುಸ್ತಿ, ತಿಪ್ಪಣ ಒಡೆಯಾರಾಜ, ಲಿಂಗಣ ದೇವಕರ, ಗೌರವ ಅಧ್ಯಕ್ಷ ರಾಜು ಗುತ್ತೇದಾರ, ನಗರ ಅಧ್ಯಕ್ಷ ಸಂಜು ಮಂಜಳಕರ್, ಕ್ರಾಂತಿವೀರ ಬೆಳವಡಿ ವಡ್ಡರ ಯಲ್ಲಣ್ಣ ಸೇನೆ ಸಂಸ್ಥಾಪಕ ಅಧ್ಯಕ್ಷ ಜಿ ಶಿವಶಂಕರ, ರಾಘವೇಂದ್ರ ಲಸ್ಕರಿ, ರವಿಚಂದ್ರ ಗುತ್ತೇದಾರ, ರಾಜು ಸುರಪೂರ, ಲಕ್ಷ್ಮಣ ಕೊಡ್ಲಿ, ಶ್ರೀಕೃಷ್ಣ ಕುಶಾಳಕರ, ಪ್ರೋ.ರಮೇಶ ಬಿ.ಯಾಳಗಿ, ನಾಗೇಶ ಗೊಬ್ಬುರ, ಮಲ್ಲಿಕಾರ್ಜುನ್ ಚೌದ್ರಿ, ರಾಜು ಎಂಪೂರೆ, ಅರ್ಜುನ ಚೋಗಲೆ, ಭೀಮಾಶಂಕರ ಭಂಕೂರ, ಶ್ರೀಹರಿ ಜಾಧವ, ಹಣಮಂತ ಜಾಧವ, ಅರ್ಜುನ್ ಬೇಲೂರ್, ತಿಮ್ಮಣ್ಣ ಗೊಬ್ಬುರ, ಯಲ್ಲಪ್ಪ ಬೇಲೂರ, ಮೋಹನ ವಿಟಕರ್, ರವಿ ಹಾಗರಗಿ, ಪರಶುರಾಮ ಮಾಡೆಳಕರ್, ರಾಮು ಸಲ್ತಾನಪೂರ, ವಿಠಲ ನೆಲೋಗಿ, ಶಂಕರ್ ಫರತಾಬಾದ ಸೇರಿದಂತೆ ಸಮಾಜದ ಮುಖಂಡರು ಇದ್ದರು.