ಕಲಬುರಗಿ | ಕಾಯಕ-ದಾಸೋಹ ಪ್ರಜ್ಞೆ ಬೆಳೆಸಿದ ಶರಣ ಸಿದ್ಧರಾಮೇಶ್ವರರು : ನಿಂಗಣ್ಣ ಹುಳಗೋಳಕರ್

Update: 2025-01-14 15:58 GMT

ಕಲಬುರಗಿ : ಸಿದ್ಧರಾಮೇಶ್ವರರು ಕಾಯಕ, ದಾಸೋಹ ಪ್ರಜ್ಞೆಯನ್ನು ಬೆಳೆಸಿದ ಶರಣರು, ನಾಡಿನ ಎಲ್ಲ ಸಮಾಜಕ್ಕೂ ಆದರ್ಶ ಎಂದು ಬಿಜೆಪಿ ಅಧ್ಯಕ್ಷ ನಿಂಗಣ್ಣ ಹುಳಗೋಳಕರ್ ಹೇಳಿದರು.

ಶಹಾಬಾದ್ ನಗರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ ಶ್ರೀ ಸಿದ್ಧರಾಮೇಶ್ವರರ ಜಯಂತಿಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಹನ್ನೇರಡನೇ ಶತಮಾನದ ಶ್ರೇಷ್ಠ ವಚನಕಾರರಲ್ಲಿ ಸಿದ್ಧರಾಮೇಶ್ವರರು ಒಬ್ಬರು. ಸಿದ್ಧರಾಮೇಶ್ವರರು ಆ ಕಾಲದಲ್ಲಿಯೇ ಜೀವಿಗಳಿಗೆ ಬದುಕಲು ಕೆರೆಕುಂಟೆಗಳನ್ನು ಕಟ್ಟಿಸಿದ ಮಾನವೀಯತೆಯ ಹರಿಕಾರರು. ಅವರು ತಮ್ಮ ಜೀವನದಲ್ಲಿ ನುಡಿದಂತೆ ನಡೆದವರು. ಅವರ ಬದುಕಿದ ರೀತಿ ಹಾಗೂ ನುಡಿದ ಒಂದೊಂದು ಮಾತುಗಳು ನಮಗೆ ದಾರಿದೀಪವಾಗಲಿವೆ. ಅವರ ಒಂದೊಂದು ವಚನಗಳನ್ನು ತಿಳಿದುಕೊಂಡು ನಮ್ಮ ಜೀವನದಲ್ಲಿ ಅಳವಡಿಸಿದ್ದೇ ಆದರೆ ನಮ್ಮ ಜೀವನ ಪಾವನವಾಗುತ್ತದೆ ಎಂದು ಹೇಳಿದರು.

ಮುಖಂಡರಾದ ಕನಕಪ್ಪ ದಂಡಗುಲಕರ್, ಮಹಾದೇವ ಗೊಬ್ಬೂರಕರ, ಸಿದ್ರಾಮ ಕುಸಾಳೆ, ಯಲ್ಲಪ್ಪ ದಂಡಗುಲಕರ, ಸಾಯಬಣ್ಣ ಬೆಳಗುಂಪಿ, ಸೂರ್ಯಕಾಂತ ವಾರದ, ತಿಮ್ಮಣ್ಣ ಕುರಡೆಕರ, ಭೀಮಯ್ಯ ಗುತ್ತೆದಾರ, ತಿರುಮಲ ದೇವಕರ, ಗೊವಿಂದಸ್ವಾಮಿ ಕುಸಾಳೆ, ಶ್ರೀನೀವಾಸ ನೇದಲಗಿ, ಶ್ರೀ ನೀವಾಸ ದೆವಕರ ಶರಣು ಕೌಲಗಿ ,ಶ್ರೀನಾಥ ಪಾರಾ, ರೇವಣಸಿದ್ದ ಮತ್ತಿಮಡು, ಜಗದೇವ ಸುಬೆದಾರ, ದತ್ತಾತ್ರೇಯ ಫಂಡ, ಚಂದ್ರಕಾಂತ ಸುಬೆದಾರ, ಪ್ರಭು ಪಾಟೀಲ, ಶಶಿಕಲಾ ಸಜ್ಜನ, ನಂದಾ ಗುಡೂರ, ಪದ್ಮಾ ಕಟಗೆ, ವಿಜಯಲಕ್ಷ್ಮಿ ನಂದಿ, ಬಸಮ್ಮ ನಂದಿ, ಸನ್ನಿದಿ ಕುಲಕರ್ಣಿ, ದೊಡ್ಡಪ್ಪ ಹೊಸಮನಿ, ಉಮೇಶ್ ನಿಂಬಾಳಕರ, ಗೋಪಾಲ, ಅಂಬಾದಾಸ ಗುರೂಜಿ ಹಾಗೂ ಭೊವಿ ವಡ್ಡರ ಸಮಾಜದ ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ನಾರಾಯಣ ಕಂದಕೂರ ನಿರೂಪಿಸಿ, ಸ್ವಾಗತಿಸಿದರು. ಅಮರ ಕೊರೆ ವಂದಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News