ಕಲಬುರಗಿ | ಜಾತ್ರೋತ್ಸವ ನಿಮಿತ್ತ ಅಂಬಿಗರ ಚೌಡಯ್ಯ ಭಾವಚಿತ್ರದ ಭವ್ಯ ಮೆರವಣಿಗೆ

Update: 2025-01-15 10:14 GMT

ಕಲಬುರಗಿ : ಕಾಳಗಿ ಪಟ್ಟಣದಲ್ಲಿ ಮಕರ ಸಂಕ್ರಮಣ ಹಬ್ಬದಂದು ಮಂಗಳವಾರ ನಿಜ ಶರಣ ಅಂಬಿಗರ ಚೌಡಯ್ಯ ಜಾತ್ರಾ ಮಹೋತ್ಸವವು ಸಂಭ್ರಮದಿಂದ ಜರುಗಿತು.

ಜಾತ್ರಾ ಮಹೋತ್ಸವ ಹಿನ್ನಲೆ ಬೆಳಗ್ಗೆ ಅಂಬಿಗರ ಚೌಡಯ್ಯ ದೇವಸ್ಥಾನದಿಂದ ರೌದ್ರಾವತಿ ನದಿಗೆ ಭಜನೆ ಮಾಡುತ್ತಾ ತೆರಳಿ ಗಂಗಪೂಜೆ ಮಾಡಿ ತಂದ ಜಲದಿಂದ ನಿಜ ಶರಣ ಅಂಬಿಗರ ಚೌಡಯ್ಯ ಮೂರ್ತಿಗೆ ವಿಶೇಷ ಪೂಜೆ ಅಭಿಷೇಕ ಅರ್ಚನೆ ಮಹಾ ಮಂಗಳಾರತಿ ನಡೆಯಿತು.

ಈ ಸಂದರ್ಭದಲ್ಲಿ ಮುಖಂಡರಾದ ನೀಲಕಂಠ ಗುತ್ತೇದಾರ, ಬಸಯ್ಯಸ್ವಾಮಿ ಪ್ಯಾಟಿಮಠ, ಶಿವಶರಣಪ್ಪ ಕಮಲಾಪೂರ, ಕೋಲಿ ಸಮಾಜದ ಮುಖಂಡ ಶಿವಶರಣಪ್ಪ ಗುತ್ತೇದಾರ, ಜಗನ್ನಾಥ ಚಂದನಕೇರಿ, ರೇವಣಸಿದ್ದ ಮುಕರಂಬಿ, ವಿಶ್ವನಾಥ ವನಮಾಲಿ, ಶಿವರಾಯ ಕೋಯಿ, ಶಾಮರಾವ ಕಡಬೂರ, ವೇದಪ್ರಕಾಶ ಮೊಟಗಿ, ಪ್ರಶಾಂತ ಕದಮ, ರಮೇಶ ಕಿಟ್ಟದ, ವೀರೇಶ ಕಣ್ಣಿ, ಸಿದ್ಧರಾಮಯ್ಯ ಸ್ವಾಮಿ, ಗೌರಿಶಂಕರ ಗುತ್ತೇದಾರ, ಸಿದ್ಧು ಸೂಗುರ, ಜಿಯಾವುದ್ಧಿನ ಸೌದಾಗಾರ, ಪರಮೇಶ್ವರ ಮಡಿವಾಳ, ಸಂತೋಷ ಪತಂಗೆ, ಸಂತೋಷ ಕಡಬೂರ, ಗುಡುಸಾಬ ಕಮಲಾಪೂರ, ಮುನೀರಬೇಗ ಬಿಜಾಪುರ, ಪ್ರಭಾಕಾರ ರಟಕಲ್, ಅಸ್ಲಾಂಬೇಗ್ ಬಿಜಾಪುರ, ದೇವೇಂದ್ರ ಚಿಮ್ಮನಚೋಡ, ಕಾಳಪ್ಪ ಕರೆಮನೋರ, ದಯಾನಂದ ಹೊಸಮನಿ, ಬಾಬು ನಾಟೀಕಾರ, ಬಾಜೀರಾವ ಡೊಂಗರೆ, ಸಂಗಮೇಶ ಬಡಿಗೇರ, ಕಾಶಿನಾಥ ತೆಲಗಾಣಿ, ರೇವಣಸಿದ್ಧ ಕಲಶೆಟ್ಟಿ, ಪ್ರಕಾಶ ಶೆಗಾಂವಕಾರ, ಕಾಳಪ್ಪ ತಳವಾರ, ಮೈಲಾರಿ ರಾಜಾಪೂರ, ನಾಗಪ್ಪ ದೊಡ್ಡಮನಿ, ಜಗನ್ನಾಥ ರಾಜಾಪೂರ, ನಂದಕುಮಾರ ರಾಜಾಪೂರ ಸೇರಿದಂತೆ ಅನೇಕರು ಹಾಜರಿದ್ದರು.

ಕಾಳಗಿ ಪೊಲೀಸ್ ಠಾಣೆ ಪಿಎಸ್ಐ ತಿಮ್ಮಯ್ಯ ಬಿ.ಕೆ ನೇತೃತ್ವದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸಲಾಗಿತ್ತು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News