ಕಲಬುರಗಿ | ಮಾ.21 ರಂದು ಮಿನಿ ಉದ್ಯೋಗ ಮೇಳ

Update: 2025-03-17 17:53 IST
ಕಲಬುರಗಿ | ಮಾ.21 ರಂದು ಮಿನಿ ಉದ್ಯೋಗ ಮೇಳ
  • whatsapp icon

ಕಲಬುರಗಿ : ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಇದೇ ಮಾ. 21ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಕಲಬುರಗಿ ಸರ್ಕಾರಿ ಐಟಿಐ ಕಾಲೇಜು ಹಿಂದುಗಡೆಯಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಮಿನಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಮಹಿಂದ್ರಾ ಶಹಾ ಮೋಟಾರ್ಸ್‍ದಲ್ಲಿ ಸೇಲ್ಸ್ ಎಕ್ಸಿಕ್ಯೊಟಿವ್ ಹುದ್ದೆಗೆ ಪಿಯುಸಿ/ಯಾವುದೇ ಪದವಿ ಪಾಸಾಗಿರಬೇಕು. ಟೆಕ್ನಿಶಿಯನ್ ಮತ್ತು ಅಡ್ವೈಜರ್ ಹುದ್ದೆಗಳಿಗೆ ಐಟಿಐ/ ಡಿಪ್ಲೋಮಾ ಪಾಸಾಗಿರಬೇಕು. ಸೇಲ್ಸ್ ಮ್ಯಾನೇಜರ್ ಹುದ್ದೆಗೆ ಎಮ್.ಬಿ.ಎ/ ಯಾವುದೇ ಪದವಿ ಪಾಸಾಗಿರಬೇಕು. 18 ರಿಂದ 35 ವರ್ಷದೊಳಗಿರಬೇಕು.

ಟೆಕ್ ಮಹಿಂದ್ರಾದಲ್ಲಿ ಕಸ್ಟಮರ್‍ಕೇರ್ ಅಸೋಸಿಯೇಟ್ಸ್ (ಸಿ.ಸಿ.ಎ.) ಹುದ್ದೆಗೆ ಪಿಯುಸಿ / ಯಾವುದೇ ಪದವಿ ಪಾಸಾಗಿರಬೇಕು. ಕೆ.ಎನ್.ಎನ್.ಡಿ. ದಲ್ಲಿ ಎಸಿ ಟೆಕ್ನಿಶಿಯನ್ ಹುದ್ದೆಗೆ ಐಟಿಐ/ಡಿಪ್ಲೋಮಾ ಪಾಸಾಗಿರಬೇಕು. ವಯೋಮಿತಿ 18 ರಿಂದ 30 ವರ್ಷದೊಳಗಿರಬೇಕು.

ಎಚ್‍ಸಿಜಿ ಕ್ಯಾನ್ಸರ್ ಸೆಂಟರ್ ನಲ್ಲಿ ಎಕ್ಸ್-ರೇ ಟೇಕಿಶಿಯನ್ ಹುದ್ದೆಗೆ ಡಿಪ್ಲೋಮಾ ಇನ್ ಎಕ್ಸ್-ರೇ ಟೇಕ್ನೋಲಾಜಿ ವಿದ್ಯಾರ್ಹತೆ ಹೊಂದಿರಬೇಕು. ಫಾರ್ಮಾಸಿಸ್ಟ್ ಹುದ್ದೆಗೆ ಡಿ ಫಾರ್ಮಾ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 30 ವರ್ಷದೊಳಗಿರಬೇಕು.

ಸ್ವತಂತ್ರ ಮೈಕ್ರೋ ಫೈನಾನ್ಸ್ ದಲ್ಲಿ ಫೀಲ್ಡ್ ಆಫೀಸರ್ ಹುದ್ದೆಗೆ ಎಸೆಸೆಲ್ಸಿ/ ಪಿಯುಸಿ/ ಐಟಿಐ ವಿದ್ಯಾರ್ಹತೆ ಹೊಂದಿರಬೇಕು. ಕಲೆಕ್ಷನ್ ಆಫೀಸರ್ ಹುದ್ದೆಗೆ ಪಿಯುಸಿ ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ 18 ರಿಂದ 28 ವರ್ಷದೊಳಗಿರಬೇಕು. ಅಡಿಟ್ ಹುದ್ದೆಗೆ ಪಿಯುಸಿ ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ 18 ರಿಂದ 35 ವರ್ಷದೊಳಗಿರಬೇಕು.

ಮೆಡ್‍ಪ್ಲಸ್‍ದಲ್ಲಿ ಫಾರ್ಮಾಸಿಸ್ಟ್ ಹುದ್ದೆಗೆ ಡಿ/ಬಿ ಫಾರ್ಮಾ ವಿತ್ ಪಿಸಿಐ ಪಾಸಾಗಿರಬೇಕು. ಫಾರ್ಮಾಸಿ ಎಡ್ ಹುದ್ದೆಗೆ ಎಸೆಸೆಲ್ಸಿ ಪಿಯುಸಿ ಯಾವುದೇ ಪದವಿ ಪಾಸಾಗಿರಬೇಕು. ಸಿ.ಎಸ್.ಎ. ಹುದ್ದೆಗೆ ಎಸೆಸೆಲ್ಸಿ, ಪಿಯುಸಿ. ಪಾಸಾಗಿರಬೇಕು. ವಯೋಮಿತಿ 18 ರಿಂದ 30 ವರ್ಷದೊಳಗಿರಬೇಕು.

ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮಎಲ್ಲಾ ಅಂಕಪಟ್ಟಿಗಳ ಝೆರಾಕ್ಸ್, ರೆಸ್ಯೂಮ್(ಬಯೋಡೇಟಾ) ಭಾವಚಿತ್ರಗಳೊಂದಿಗೆ ಆಧಾರ್‍ ಕಾರ್ಡ್‍ದೊಂದಿಗೆ ಮೇಲ್ಕಂಡ ದಿನದಂದು ನಡೆಯುವ ಮಿನಿ ಉದ್ಯೋಗ ಮೇಳದಲ್ಲಿ ಭಾಗವಹಿಸಬೇಕು. ನೇರ ಸಂದರ್ಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆಯನ್ನು ನೀಡಲಾಗುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ 08472-274846 ಹಾಗೂ ಮೊಬೈಲ್ ಸಂಖ್ಯೆ 9620095270 ಅಥವಾ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News