ಕಲಬುರಗಿ | ಲೋಕಾಯುಕ್ತ ಬಲೆಗೆ ಬಿದ್ದಿದ್ದ ಪಿಡಿಒ ಪ್ರೀತಿರಾಜ್ ಅಮಾನತು

Update: 2024-12-17 11:42 GMT

ಕಲಬುರಗಿ : ಸೋಮವಾರವಷ್ಟೇ 17,000 ರೂ. ಫೋನ್ ಪೇ ಮೂಲಕ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತರ ಬಲೆಗೆ ಬಿದ್ದ ಕಮಲಗಾ(ಬಿ) ಪಂಚಾಯತ್ ನ ಪಿಡಿಒ ಪ್ರೀತಿರಾಜ್ ಅವರನ್ನು ಕೆಲಸದಿಂದ ಅಮಾನತುಗೊಳಿಸಿ ಆದೇಶಿಸಲಾಗಿದೆ.

ಪಿಡಿಒ ಪ್ರೀತಿರಾಜ್ ಅವರಿಗೆ ಕೆಲವು ದಿನಗಳ ಹಿಂದೆ ಮನರೇಗಾ ಯೋಜನೆಯಲ್ಲಿ ಪ್ರಗತಿ ಸಾಧಿಸದೆ ಇರುವುದರಿಂದ ಅವರಿಗೆ ಹಲವು ಬಾರಿ ನೋಟಿಸ್ ನೀಡಲಾಗಿತ್ತು, ಗುರಿ ಅನುಗುಣವಾಗಿ ಕೆಲಸ ನಿರ್ವಹಿಸದೆ ಪಿಡಿಒ ವಿಫಲರಾಗಿದ್ದರು. ಅದರ ಜೊತೆಗೆ ಇದೀಗ ಸೋಮವಾರ ಪಂಪ್ ಆಪರೇಟರ್ ರೊಬ್ಬರ ಮರು ನೇಮಕಾತಿ ಮತ್ತು ಆರು ತಿಂಗಳ ವೇತನ ಮಂಜೂರು ಮಾಡಲು ಲಂಚ ಪಡೆದಿದ್ದರು. ಈ ಕುರಿತಾಗಿ ಲೋಕಾಯುಕ್ತರು ಪ್ರೀತಿರಾಜ್ ಅವರನ್ನು ಬಂಧಿಸಿ, ಜಿಲ್ಲಾ ಪಂಚಾಯತ್ ಸಿಇಒ ಅವರಿಗೆ ಮಾಹಿತಿ ನೀಡಿದ್ದರು.

ಸರಕಾರಿ ಕೆಲಸಗಳು ಅನುಷ್ಠಾನಗೊಳಿಸದೆ ವಿಫಲರಾಗಿದ್ದರಿಂದ ಮತ್ತು ಲಂಚ ಪಡೆದ ಆರೋಪದಲ್ಲಿ ಪಿಡಿಒ ಪ್ರೀತಿ ರಾಜ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಸಿಇಒ ಭವರ್ ಸಿಂಗ್ ಮೀನಾ ಅವರು ಆದೇಶ ಹೊರಡಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News