ಕಲಬುರಗಿ | ಐನೆಕ್ಸ್ ಸ್ಪರ್ಧೆಗಳಲ್ಲಿ ಬೆಳ್ಳಿ ಪದಕ ಪಡೆದುಕೊಂಡ ಪಿಡಿಎ ಕಾಲೇಜಿನ ವಿದ್ಯಾರ್ಥಿಗಳು

Update: 2024-11-17 16:27 GMT

ಕಲಬುರಗಿ : ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಇಂಡಿಯಾ ಅಂತರ್ರಾಷ್ಟ್ರೀಯ ಆವಿಷ್ಕಾರ ಮತ್ತು ಆವಿಷ್ಕಾರ ಎಕ್ಸ್ಪೋ (ಐನೆಕ್ಸ್) 2024ರ ಸ್ಪರ್ಧೆಗಳಲ್ಲಿ ಬೆಳ್ಳಿ ಪದಕ ಪಡೆಯುವುದರೊಂದಿಗೆ ಕಲಬುರಗಿ ಜಿಲ್ಲೆಗೆ ಹಾಗೂ ಸಂಸ್ಥೆಗೆ ಮತ್ತು ಕಾಲೇಜಿಗೆ ಹೆಮ್ಮೆ ತಂದಿದ್ದಾರೆ.

ನ.13 ರಿಂದ 15 ರವರಗೆ ದಕ್ಷಿಣ ಗೋವಾದ ಫಟೋರ್ಡಾದ ಡಾನ್ ಬಾಸ್ಕೋ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಈ ಸ್ಪರ್ಧೆಗಳಲ್ಲಿ 15ಕ್ಕೂ ಹೆಚ್ಚು ದೇಶಗಳು ಸುಮಾರು 150 ಕ್ಕೂ ಹೆಚ್ಚು ಪ್ರತಿನಿಧಿಗಳ ಹೊಸ ಹೊಸ ಸಂಶೋಧನಾ ಆವಿಷ್ಕಾರಗಳ ಪ್ರೋಜೆಕ್ಟ್ ಗಳು ಪ್ರದರ್ಶನಗೊಂಡಿದ್ದವು.

ಅದರಲ್ಲಿ ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಸಂಕೇತ ಕಾರ್, ಅವಂತಿಕಾ ಇನಾಂದಾರ್, ದಿವ್ಯ ದಾವಣಗೆರೆ, ನವೀದ್ ಅಖ್ತರ್ ಮತ್ತು ಸಾನಿದಾಸ್ ತಂಡದ ಸಂಶೋಧನಾ ಪ್ರೋಜೆಕ್ಟ್ ತಾಂತ್ರಿಕ ಕೌಶಲ್ಯದ ಬಳಕೆ, ಅತ್ಯುತ್ತಮವಾದ ಕಾರ್ಯವಿಧಾನದಿಂದ ಬೆಳ್ಳಿ ಪದಕವನ್ನು ಪಡೆದಿದೆ.

ಈ ಐನೆಕ್ಸ್ 2024ರ ಸ್ಪರ್ಧೆಗಳನ್ನು ಗೋವಾ ರಾಜ್ಯದ ಆವಿಷ್ಕಾರ ಮಂಡಳಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಇಂಡಿಯನ್ ಇನ್ನೋವೆಟರ್ಸ ಅಸೋಸಿಯೇಷನ್ ಸಹಯೋಗದಲ್ಲಿ ನಡೆಸಲಾಗಿತ್ತು. ಇದು ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಹೊಸ ಸಂಶೋಧನೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸಲು ಕೆಲಸ ಮಾಡುತ್ತಿದೆ. ಇಂತಹ ಸಾಧನೆ ಮಾಡಿದ ಕಾಲೇಜಿನ ವಿದ್ಯಾರ್ಥಿಗಳ ತಂಡಕ್ಕೆ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ.ನಮೋಶಿ ಅಭಿನಂದನೆ ಸಲ್ಲಿಸಿ, ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ತಾಂತ್ರಿಕ ಕೌಶಲ್ಯವನ್ನು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ಮಾಡುವುದರೊಂದಿಗೆ ಕಲಬುರಗಿ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಶ್ಲಾಘಿಸಿದರು.

ಸಂಸ್ಥೆಯ ಉಪಾಧ್ಯಕ್ಷರಾದ ರಾಜಾ ಭೀಮಳ್ಳಿ, ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ ಜಂಟಿ ಕಾರ್ಯದರ್ಶಿಗಳಾದ ಡಾ.ಕೈಲಾಸ ಪಾಟೀಲ್ ಹಾಗೂ ಆಡಳಿತ ಮಂಡಳಿ ಸದಸ್ಯರು ಅಭಿನಂದಿಸಿದರು.

ವಿದ್ಯಾರ್ಥಿಗಳ ಸಾಧನೆಗೆ ಪ್ರಾಚಾರ್ಯರಾದ ಡಾ.ಸಿದ್ಧರಾಮ ಪಾಟೀಲ್, ಉಪ ಪ್ರಾಚಾರ್ಯರಾದ ಡಾ.ಎಸ್.ಆರ್.ಹೊಟ್ಟಿ, ಡಾ.ಭಾರತಿ ಹರಸೂರ, ಐಎಸ್ ಮತ್ತು ಎಐಎಂಎಲ್ ವಿಭಾಗದ ಮುಖ್ಯಸ್ಥರಾದ ಡಾ.ಉದಯ ಬಾಲಗಾರ, ಸಿಎಸ್ ವಿಭಾಗದ ಡಾ.ಸುಜಾತಾ ತೇರದಾಳ, ಮಾರ್ಗದರ್ಶಕರಾದ ನಾಗೇಶ್ ಸಾಲಿಮಠ, ಡಾ.ವಿಷ್ಣುಮೂರ್ತಿ ಬುರಕಪಳ್ಳಿ, ಅಶೋಕ್ ಪಾಟೀಲ್, ಪ್ರಿಯಾಂಕ ದೇವಣಿ, ಅಶ್ವಿನಿ ಹಟ್ಟಿ ಪ್ರಶಂಸೆ ವ್ಯಕ್ತಪಡಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News