ಕಲಬುರಗಿ | ಸಾಹಿತ್ಯ ಸಮ್ಮೇಳನಕ್ಕೆ ಶುಭ ಹಾರೈಸಿದ ಸರ್ಕಾರಿ ನೌಕರರ ಸಂಘ

Update: 2025-01-07 12:46 GMT

ಕಲಬುರಗಿ : ಜ.13ರಂದು ಆಳಂದ ತಾಲೂಕಿನ ಗಡಿಗ್ರಾಮ ಹಿರೋಳಿಯಲ್ಲಿ ಹಮ್ಮಿಕೊಂಡಿರುವ ಆಳಂದ ತಾಲೂಕು 12ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಾಲೂಕಿನ ಸರ್ಕಾರಿ ನೌಕರರ ಸಂಘ ಶುಭ ಹಾರೈಸಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಸಂಘವು, ಐತಿಹಾಸಿಕ ಹಿನ್ನೆಲೆಯುಳ್ಳ ಗಡಿಗ್ರಾಮದಲ್ಲಿ ಸಮ್ಮೇಳನ ಹಮ್ಮಿಕೊಂಡಿರುವುದು ಸಂತಸದ ವಿಷಯ. ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆಯುತ್ತಿರುವ ಆಳಂದ ತಾಲೂಕಿನ 12ನೇ ಕನ್ನಡ ಸಾಹಿತ್ಯ ಸಮ್ಮೇಳನವು ಗಡಿಗ್ರಾಮ ಹಿರೋಳಿಯಲ್ಲಿ ಇದೇ ತಿಂಗಳು ಜ.13ರಂದು ಜರುಗಲಿದೆ. ಸದರಿ ಕಾರ್ಯಕ್ರಮದಲ್ಲಿ ಆಳಂದ ತಾಲೂಕಿನ ಸಮಸ್ತ ಕನ್ನಡ ಅಭಿಮಾನಿಗಳು ಹಾಗೂ ಸರ್ಕಾರಿ ನೌಕರ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ತನು-ಮನದಿಂದ ಸಹಕರಿಸಲು ಕೋರಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತು ನಿರಂತರವಾಗಿ ಕನ್ನಡ ಕಟ್ಟುವ ಕಾರ್ಯ ಚಟುವಟಿಕೆ ಹಮ್ಮಿಕೊಳ್ಳುತ್ತಿದೆ. ಸ್ಥಳಿಯ ಕಲಾವಿದರು, ಸಾಹಿತಿಗಳು ಹಾಗೂ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಕನ್ನಡದ ಒಲವು ಅಭಿಮಾನ ಮೂಡಿಸಲು ಮುಂದಾಗಿದೆ ಎಂದಿದೆ.

ಸಮ್ಮೇಳನದಲ್ಲಿ ಭಾಗವಹಿಸುವ ತಾಲೂಕಿನ ಶಿಕ್ಷಕರಿಗೆ ಓಓಡಿ ಸೌಲಭ್ಯ ಇರಲಿದೆ. ತಾಲೂಕಿನ ಶಿಕ್ಷಕ ವೃತ್ತಿ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಜೊತೆಗೆ ಸಮ್ಮೇಳನದ ನೆನಪು ಶಾಶ್ವತವಾಗಿ ಉಳಿಯಲು ಪ್ರತಿಯೊಬ್ಬರು ಶ್ರಮಿಸಬೇಕು.

- ಹಣಮಂತ ಶೇರಿ, ಅಧ್ಯಕ್ಷ ಕಸಾಪ ಆಳಂದ ತಾಲ್ಲೂಕು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News