ಮೋದಿ ಅವರ ʼಗ್ಯಾರಂಟಿʼ ಟಿವಿಯಲ್ಲಿ ಮಾತ್ರ, ಆದರೆ ನಮ್ಮ ʼಗ್ಯಾರಂಟಿʼ ಜನರ ಕೈಯಲ್ಲಿದೆ : ಸಚಿವ ಪ್ರಿಯಾಂಕ್ ಖರ್ಗೆ

Update: 2024-03-27 15:18 GMT

ಕಲಬುರಗಿ : ಮೋದಿ ಅವರ ಗ್ಯಾರಂಟಿ ಟಿವಿಯಲ್ಲಿ ಮಾತ್ರ, ಆದರೆ ನಮ್ಮ ಗ್ಯಾರಂಟಿ ಜನರ ಕೈಯಲ್ಲಿದೆ. ಹತ್ತು ವರ್ಷಗಳು ಪೂರೈಸಿದರು ಸಾಧನೆ ಏನು ಮಾಡಕ್ಕಾಗಿಲ್ಲ, ಅದಕ್ಕಾಗಿ ದೇವರ, ಧರ್ಮದಲ್ಲಿ ಹೆಸರಲ್ಲಿ ಚುನಾವಣೆ ಎದುರಿಸುತ್ತಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಸರಕಾರ ವಿರುದ್ಧ ವಾಗ್ದಾಳಿ ನಡೆಸಿದರು.

ಬುಧವಾರ ಕಲಬುರಗಿ ನಿವಾಸದಲ್ಲಿ ಮಾತನಾಡಿದ ಅವರು, ಬಿಜೆಪಿಯವರಿಗೆ ಕಾಂಗ್ರೆಸ್ ಹೆಸರು ಹೇಳದೆ ಮಾತಡಾಲು ಸಾಧ್ಯವಿಲ್ಲ. ಅವರು ಮಾಡಿರುವ ಕೆಲಸವನ್ನು ಹೇಳಿ‌ ಜನರಿಗೆ ಮತಕೇಳುವ ಶಕ್ತಿ ಬಿಜೆಪಿಯವರಿಗಿಲ್ಲ ಎಂದು ಕೀಡಿಕಾರಿದರು.

ಬಿಜೆಪಿ ಸುನಾಮಿ ಇದ್ದಿದ್ರೆ ಬಿಜೆಪಿ ಪಕ್ಷದ ನಾಯಕರ ವಿರುದ್ಧ ಸ್ವಪಕ್ಷದ ಕಾರ್ಯಕರ್ತರಿಂದ ಗೋಬ್ಯಾಕ್ ಅಭಿಯಾನ ಆರಂಭವಾಗುತ್ತಿರಲಿಲ್ಲ. ʼಮೊಸ್ಟ್ ಪವರ್ ಫುಲ್ ಪಾರ್ಟಿʼ ಎಂದು ಕರೆಸಿಕೊಳ್ಳುವ ಬಿಜೆಪಿ, ಮೋದಿ ಅವರ ಸುನಾಮಿ ಇದ್ದಿದ್ದರೆ ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಆಂದ್ರಪ್ರದೇಶದ ಹಾಗೂ ತಮಿಳುನಾಡಿನಲ್ಲಿ ಮೈತ್ರಿ ಮಾಡಿಕೊಳ್ಳುತ್ತಿರಲಿಲ್ಲ. ಬೇರೆ ಪಕ್ಷಗಳೊಂದಿಗೆ ಮೈತ್ರಿಯ ಅಗತ್ಯ ಇರುತ್ತಿರಲಿಲ್ಲ. ಸ್ವಂತ ಬಲದಲ್ಲಿ ಚುನಾವಣೆಗೆ ಸಜ್ಜಾಗುತ್ತಿದ್ದರು. ಬಿಜೆಪಿ ಅಸ್ತಿತ್ವ ಉಳಿಸಿಕೊಳ್ಳಲು ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ಶಾಡ್ಯೋ ಸಿಎಂ, ಡಿಸಿಎಂ ಎಂದು ಹೇಳುವ ಬಿಜೆಪಿಗರು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ನಮ್ಮ ಪಕ್ಷ ಸ್ಪಷ್ಟವಾಗಿ ಜವಾಬ್ದಾರಿ ಹಂಚಿಕೆ ಮಾಡಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಮತ್ತು ಶಿವಕುಮಾರ್ ಉಪ ಮುಖ್ಯಮಂತ್ರಿ. ಅವರ ಜೊಡಿ ನಾಯಕತ್ವದಲ್ಲಿ ಈ ಚುನಾವಣೆ ಗೆಲ್ಲಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News