ನ.5-6ರಂದು ರಾಷ್ಟ್ರೀಯ ವಿಚಾರ ಸಂಕಿರಣ : ನಮೋಶಿ

Update: 2024-11-04 12:30 GMT

ಕಲಬುರಗಿ : ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ವೀರಮ್ಮ ಗಂಗಶ್ರೀ ಮಹಿಳಾ ಕಾಲೇಜು ವತಿಯಿಂದ ಕೇಂದ್ರ ಸರಕಾರದ ಎಂ.ಎಚ್.ಆರ್. ಎಸ್. ಸಹಯೋಗದಲ್ಲಿ ಕೃತಕ ಬುದ್ದಿಮತ್ತೆ, ಸಾಮಾಜಿಕ ಜಾಲತಾಣಗಳು ಮತ್ತು ಸಮಾಜ ಎಂಬ ವಿಷಯಗಳ ಮೇಲೆ ಎರಡು ದಿನಗಳ ಕಾಲ ರಾಷ್ಟ್ರೀಯ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಎಚ್.ಕೆ.ಇ. ಸಂಸ್ಥೆಯ ಅಧ್ಯಕ್ಷ, ವಿಪ ಸದಸ್ಯ ಶಶೀಲ ನಮೋಶಿ ಅವರು ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಪಿಡಿಎ ಕಾಲೇಜಿನ ಸ್ಯಾಕ್ ಸಭಾಂಗಣದಲ್ಲಿ ನಡೆಯಲಿರುವ ರಾಷ್ಟ್ರೀಯ ಸೆಮಿನಾರ್ನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿಬಿಟಿ ಸಚಿವರು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಮಂತ್ರಿ ಪ್ರಿಯಾಂಕ್ ಖರ್ಗೆ ಅವರು ಉದ್ಘಾಟಿಸುವರು. ಎಚ್ಕೆಇ ಸಂಸ್ಥೆಯ ಅಧ್ಯಕ್ಷರಾದ ಶಶೀಲ ನಮೋಶಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಕೇಂದ್ರೀಯ ವಿವಿ ಗುಜರಾತ್ ಕಲಬುರಗಿ ವಿವಿ ನಿವೃತ್ತ ರಜಿಸ್ಟ್ರಾರ್ರಾದ ಪ್ರೊ. ಎಸ್.ಎಲ್ ಹಿರೇಮಠ ಅವರು ಮುಖ್ಯ ಭಾಷಣಕಾರರಾಗಿ ಭಾಗವಹಿಸಲಿದ್ದಾರೆಂದು ಹೇಳಿದರು.

ಕಾರ್ಯಕ್ರಮದ ಸೆಮಿನಾರ್ನಲ್ಲಿ ಪ್ರಕ್ರಿಯೆಗಳ ಬಿಡುಗಡೆಯನ್ನು ಐಸಿಎಸ್ಎಸ್ಆರ್, ಎಸ್ಆರ್ಎಸ್ ಹೈದರಾಬಾದ್ನ ಸುಧಾಕರ ರೆಡ್ಡಿಯವರು ಮಾಡುವರು. ಪ್ರೊ. ನುಶ್ರತ್ ಫಾತೀಮಾ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು, ಸಂಸ್ಥೆಯ ಉಪಾಧ್ಯಕ್ಷ ರಾಜಾ ಭೀಮಳ್ಳಿ, ಉದಯಕುಮಾರ ಚಿಂಚೋಳಿ, ಕೈಲಾಸ್ ಪಾಟೀಲ ಸೇರಿದಂತೆ ಮತ್ತಿತರರು ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.

ಅಂದು ಮಧ್ಯಾಹ್ನ 12.30ಗಂಟೆಗೆ ನಡೆಯಲಿರುವ ಮೊದಲ ಗೋಷ್ಠಿಯಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಸಮಾಜ ಎಂಬ ವಿಷಯದ ಮೇಲೆ ಪ್ರೊ. ಮಧುಸುದನ್ ಜೆ.ವಿ., ಡಾ. ಕೆ.ಎಂ. ಝೀಯಾಉದ್ದೀನ್, ಪ್ರೊ. ಶ್ರೀದೇವಿ ಸೋಮಾ, ಡಾ. ಎ.ಜಿ. ಖಾನ್ ಅವರು ವಿಷಯ ಮಂಡಿಸುವರು. ನ. 6ರಂದು ಬೆಳಿಗ್ಗೆ 10.30ಗಂಟೆಗೆ ನಡೆಯಲಿರುವ 2ನೇ ಗೋಷ್ಠಿಯು ವಿ.ಜಿ. ಮಹಿಳಾ ಕಾಲೇಜಿನ ಅಡಿಟೋರಿಯಮ್ ಸಭಾಂಗಣದಲ್ಲಿ ಸಾಮಾಜಿಕ ಜಾಲತಾಣಗಳು ಮತ್ತು ಸಮಾಜ ವಿಷಯದ ಮೇಲೆ ಪ್ರೊ. ಸುಧಾ ಖೋಕಟೆ, ಪ್ರೊ. ಚಂದ್ರಶೇಖರ ಎಸ್, ಮನೋಜ ಗುದ್ದಿ ಅವರು ವಿಷಯ ಮಂಡನೆ ಮಾಡಲಿದ್ದಾರೆಂದು ಮಾಹಿತಿ ನೀಡಿದರು.

ಅಂದು ಮಧ್ಯಾಹ್ನ 2 ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದೆ ಎಂದು ತಿಳಿಸಿದರು. ಎರಡು ದಿನಗಳ ಕಾಲ ನಡೆಯಲಿರುವ ಸೆಮಿನಾರ್ನಲ್ಲಿ ಪಾಲ್ಗೊಳ್ಳಲು ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಮತ್ತು ಉತ್ತರಾಖಂಡ ರಾಜ್ಯಗಳಿಂದ 147 ಜನರ ಈಗಾಗಲೇ ಆನ್ಲೈನ್ನಲ್ಲಿ ನೊಂದಾಯಿಸಿಕೊಂಡಿದ್ದಾರೆ, ಸುಮಾರು 250ಕ್ಕೂ ಹೆಚ್ಚು ಡೆಲಿಗೇಟ್ಸ್ಗಳು ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೊಷ್ಠಿಯಲ್ಲಿ ಡಾ. ಎಸ್.ಆರ್. ಹರವಾಳ, ಡಾ. ರಾಜೇಂದ್ರ ಕೊಂಡಾ, ಡಾ. ಮಹೇಶ ಗಂವಾ, ಐ.ಕೆ. ಪಾಟೀಲ ಇದ್ದರು.

ಮಕ್ಕಳಿಗೆ ಉಚಿತ ಚಿಕಿತ್ಸೆ :

ಬಸವೇಶ್ವರ ಆಸ್ಪತ್ರೆಯಲ್ಲಿ ಶಾಲಾ ಸಂಜಿವಿನಿ ಯೋಜನೆಯನ್ನು ಪ್ರಾರಂಭಿಸಲು ಯೋಜನೆ ಹಾಕಿಕೊಳ್ಳಲಾಗಿದೆ, ಈ ಯೋಜನೆ ಮೂಲಕ ಸಂಸ್ಥೆಯ ವತಿಯಿಂದ ಜಿಲ್ಲೆಯ ಶಾಲಾ ಮಕ್ಕಳಿಗೆ ಕರೆದುಕೊಂಡು ಬಂದು ಕಣ್ಣು, ಮೂಗು, ಕಿವಿ, ಮೂಗು, ದಂತಕ್ಕೆ ಉಚಿತವಾಗಿ ತಪಾಸಣೆ ಮತ್ತು ಅವಶ್ಯಕತೆಯಿರುವ ಮಕ್ಕಳಿಗೆ ಉಚಿತ ಚಿಕಿತ್ಸೆಯನ್ನು ಸಹ ನೀಡಲಾಗುವುದು. ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ತಜ್ಞರ ಆಯ್ಕೆ ಜೊತೆಗೆ ಮುಂದಿನ 6-7 ತಿಂಗಳಲ್ಲಿ ಕಾರ್ಡಿಯೋಲಾಜಿ ವಿಭಾಗವು ಸಹ ತೆರೆಯಲಾಗುವುದು ಎಂದು ಶಶೀಲ್ ನಮೋಶಿ ತಿಳಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News