ʼವಕ್ಫ್ ಆಸ್ತಿʼ ಬಗ್ಗೆ ಬಿಜೆಪಿಯಿಂದ ವದಂತಿ ಹಬ್ಬಿಸುವ ಯತ್ನ : ಝಮೀರ್ ಅಹ್ಮದ್

Update: 2024-11-04 11:46 GMT

 ಝಮೀರ್ ಅಹ್ಮದ್ ಖಾನ್

ಕಲಬುರಗಿ : "ವಕ್ಫ್ ಆಸ್ತಿ ಕುರಿತು ಬಿಜೆಪಿ ಇಲ್ಲಸಲ್ಲದ ವದಂತಿಗಳನ್ನು ಹಬ್ಬಿಸುವ ಪ್ರಯತ್ನ ಮಾಡುತ್ತಿದೆ. ಇದರಿಂದ ಬಿಜೆಪಿಗೆ ಯಾವುದೇ ರೀತಿಯ ಲಾಭ ಆಗುವುದಿಲ್ಲ"  ಎಂದು ಸಚಿವ ಝಮೀರ್ ಅಹ್ಮದ್ ಖಾನ್, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʼವಕ್ಫ್  ಸ್ವಾತಂತ್ರ್ಯ ಬರುವುದಕ್ಕಿಂತ ಮುಂಚೆಯಿಂದಲೂ ಇದೆ. ವಕ್ಫ್ ಬಳಿ ಇರುವುದು ಸರಕಾರ ಕೊಟ್ಟಿರುವ ಜಮೀನಲ್ಲ, ಬದಲಿಗೆ ದಾನಿಗಳು ಕೊಟ್ಟಿರುವ ಜಮೀನಾಗಿದೆ. ಅದೀಗ ಮಂಡಳಿ ಬಳಿಯಿದೆ. ಇಷ್ಟಾದರೂ ಕೇಂದ್ರ ಸರಕಾರ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿದೆ. ಅದಕ್ಕಾಗಿಯೇ ಇಷ್ಟೆಲ್ಲಾ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ʼರೈತರಷ್ಟೇ ಅಲ್ಲ, ಸಾಮಾನ್ಯ ಜನರ ಆಸ್ತಿಗಳನ್ನೂ ವಕ್ಫ್ ಪಡೆದುಕೊಳ್ಳುವುದಿಲ್ಲ. ಕಳೆದ ಹತ್ತಾರು ವರ್ಷಗಳಿಂದ ವಕ್ಫ್ ಆಸ್ತಿಗಳಲ್ಲಿ ಹಲವರು ಮನೆ ಕಟ್ಟಿಕೊಂಡಿದ್ದಾರೆ. ಆದರೂ, ಅಂಥವರಿಗೆ ತೊಂದರೆ ಕೊಡಬಾರದು ಎಂದು ನಾನು ಹೇಳಿದ್ದೇನೆʼ ಎಂದರು.

ಉಲ್ಟಾ ಹೊಡೆದ ಬೊಮ್ಮಾಯಿ :

ಬಿಜೆಪಿಯ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ʼ2022ರಲ್ಲಿ ಸವಣೂರಿನಲ್ಲಿ ನಡೆದ ವಕ್ಫ್ ಸಭೆಯಲ್ಲಿ ಇದು ಅಲ್ಲಾಹನ ಆಸ್ತಿ, ನೀವು ಸುಮ್ಮನೆ ಕೂರಬಾರದು, ಸ್ವಾಧೀನ ಮಾಡಿಕೊಂಡಿರುವ ಎಲ್ಲ ಆಸ್ತಿಗಳನ್ನು ವಾಪಸ್ ಪಡೆಯಬೇಕು ಎಂದು ಹೇಳಿದ್ದರುʼ ಇದೀಗ ಅವರೇ ಉಲ್ಟಾ ಹೊಡೆಯುತ್ತಿದ್ದಾರೆ ಎಂದು ಸಚಿವ ಝಮೀರ್ ಅಹ್ಮದ್ ಖಾನ್ ಕಿಡಿಕಾರಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News